ʻನೆಹರು ಅವ್ರಿಂದ ಭಾರತಕ್ಕೆ ಸಮಸ್ಯೆʼ: ಸಿಡಿದ ಎಸ್‌ ಜೈಶಂಕರ್‌!

masthmagaa.com:

ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಸದಸ್ಯತ್ವದ ಬಗ್ಗೆ ಮಾತನಾಡೋವಾಗ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಚೀನಾ ಮೊದಲು…ಭಾರತ ನಂತ್ರ ಅಂತ ಹೇಳಿದ್ರು ಅಂತ ನೆಹರು ಅವ್ರನ್ನ ಟೀಕಿಸಿದ್ದಾರೆ. ʻ1950ರಲ್ಲಿ ಪಾಕಿಸ್ತಾನ ಮತ್ತು ಚೀನಾದಿಂದ ಅಪಾಯವಿದೆ ಅಂತ ಸರ್ದಾರ್‌ ಪಟೇಲ್‌ ಅವ್ರು ಸಾಕಷ್ಟು ಬಾರಿ ನೆಹರು ಅವ್ರಿಗೆ ವಾರ್ನ್‌ ಮಾಡಿದ್ರು. ಚೀನಾವನ್ನ ನಂಬಬೇಡಿ ಅಂತೇಳಿದ್ರು. ಆದ್ರೆ ನೆಹರು ಮಾತ್ರ ಇದನ್ನ ಒಪ್ಪಲೇ ಇಲ್ಲ. ಚೀನಾ ಬಗ್ಗೆ ಸುಮ್ಮನೆ ಅನುಮಾನ ಪಡ್ತಿದ್ದೀರಾ ಅಂತ ಸರ್ದಾರ್‌ ಪಟೇಲರಿಗೆ ಹೇಳಿದ್ರು. ಆದ್ರಿಂದಲೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸಮಸ್ಯೆ ಹುಟ್ಟಿಕೊಳ್ತು. ಭಾರತದ ಕೆಲ ಪ್ರದೇಶಗಳನ್ನ ಚೀನಾ ಆಕ್ರಮಿಸಿಕೊಳ್ತು. ಇನ್ನು ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ನೀಡೋ ವಿಚಾರವಾಗಿಯೂ ನೆಹರೂ ಅವ್ರು ಚೀನಾಗೆ ಸಪೋರ್ಟ್‌ ಮಾಡಿದ್ರು. ಮೊದಲು ಚೀನಾಗೆ ಖಾಯಂ ಸದಸ್ಯತ್ವ ಸಿಗಲಿ…ಆಮೇಲೆ ಭಾರತಕ್ಕೆ ಅಂತೇಳಿದ್ರು. ಆದ್ರೆ ಈಗ ಮೋದಿ ಸರ್ಕಾರದಲ್ಲಿ ಭಾರತ ಫರ್ಸ್ಟ್‌ ಅನ್ನೋ ಬಗ್ಗೆ ಮಾತನಾಡ್ತಿದ್ದೀವಿʼ ಅಂತೇಳಿದ್ದಾರೆ. ಇನ್ನು ಇದೇ ವೇಳೆ ಭಾರತದ ಆಂತರಿಕ ವ್ಯವಹಾರಗಳ ಬಗ್ಗೆ ಕಮೆಂಟ್‌ ಮಾಡೋದು…ಪೊಲಿಟಿಕಲ್‌ ಸ್ಟೇಟ್‌ಮೆಂಟ್‌ ನೀಡೋದನ್ನ ನಿಲ್ಲಿಸಿ ಅಂತ ಬೇರೆ ದೇಶಗಳಿಗೆ ಜೈಶಂಕರ್‌ ಅಡ್ವೈಸ್‌ ಮಾಡಿದ್ದಾರೆ. ʻಇಲ್ಲಾ ಅಂದ್ರೆ….ಅದಕ್ಕೆ ತಕ್ಕ ಉತ್ತರ ಕೊಡ್ತೀವಿ…ಭಾರತದಿಂದ ಬಲವಾದ ಪ್ರತಿಕ್ರಿಯೆ ಸಿಗುತ್ತೆ. ಈ ರೀತಿ ಬೇರೆ ದೇಶಗಳ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸೋದು ಕೆಟ್ಟ ಹವ್ಯಾಸʼ ಅಂತೇಳಿ ಎಚ್ಚರಿಕೆ ನೀಡಿದ್ದಾರೆ. ಅಂದ್ಹಾಗೆ ಭಾರತದಲ್ಲಿ ಕೇಜ್ರಿವಾಲ್‌ ಬಂಧನ ಹಾಗೂ ಕಾಂಗ್ರೆಸ್‌ನ ಅಕೌಂಟ್‌ಗಳನ್ನ ಪ್ರೀಜ್‌ ಮಾಡಿರೋ ಆರೋಪಕ್ಕೆ ಸಂಬಂಧಪಟ್ಟಂತೆ ಅಮೆರಿಕ ಜರ್ಮನಿಗಳು ಪ್ರತಿಕ್ರಿಯೆ ಕೊಟ್ಟಿದ್ದವು. ಬಹುಶಃ ಅಮೆರಿಕ ಇದಕ್ಕೆ ಈ ರೀತಿ ಪ್ರತಿಕ್ರಿಯೆ ಕೊಟ್ಟಿರಬೋದು ಅಂತ ವಿಶ್ಲೇಷಣೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply