ವಿದೇಶಿ ಪತ್ರಿಕೆಗಳನ್ನ ಪಾಲಿಟಿಕಲ್‌ ಪ್ಲೇಯರ್ಸ್‌ ಅಂದ ಜೈಶಂಕರ್‌!

masthmagaa.com:

ವಿದೇಶಿ ಮೀಡಿಯಾಗಳು ಪ್ರಧಾನಿ ಮೋದಿ ಸರ್ಕಾರವನ್ನ ವಿರೋಧಿಸಿ, ಭಾರತದ ಪ್ರಜಾಪ್ರಭುತ್ವ ಪ್ರಶ್ನಿಸಿ ಲೇಖನ ಬರೆಯೋ ವಿಚಾರವಾಗಿ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ರಿಯಾಕ್ಟ್‌ ಮಾಡಿದ್ದಾರೆ. ʻವಿದೇಶಿ ಪತ್ರಿಕೆಗಳನ್ನ ಪೊಲಿಟಿಕಲ್ ಪ್ಲೇಯರ್ಸ್‌‌, ಅಂತ ಕರೆದಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಸಭೆಯೊಂದ್ರಲ್ಲಿ ಮಾತನಾಡ್ತಾ , ʻವೆಸಟರ್ನ್‌ ಮೀಡಿಯಾಗಳು ನಮ್ಮ ಪ್ರಜಾಪ್ರಭುತ್ವವನ್ನ ಟೀಕಿಸ್ತಿವೆ ಅಂದ್ರೆ, ಅವ್ರಿಗೆ ನಮ್ಮ ಪ್ರಜಾಪ್ರಭುತ್ವ ಬಗ್ಗೆ ಮಾಹಿತಿ ಇಲ್ಲ ಅಂತಲ್ಲ. ಬದಲಿಗೆ ಅವ್ರು ನಮ್ಮ ಚುನಾವಣೆಯಲ್ಲಿ ಭಾಗಿಯಾಗಿಯಾಗೋಕೆ ಟ್ರೈ ಮಾಡ್ತಿದ್ದಾರೆ. ತಮ್ಮನ್ನ ತಾವೇ ಪಾಲಿಟಿಕಲ್‌ ಪ್ಲೇಯರ್ಸ್‌ ಅನ್ಕೊಂಡಿದ್ದಾರೆ. ಈ ಮೀಡಿಯಾಗಳೆಲ್ಲಾ ಸೇರಿ ಭಾರತದ ಜೊತೆ ಆಟವಾಡ್ತಿವೆ ಅಷ್ಟೆʼ ಅಂತ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply