2015ರ ಪ್ಯಾರಿಸ್ ದಾಳಿಯಲ್ಲಿ ಭಾಗಿಯಾಗಿದವನಿಗೆ ಜೀವಾವಧಿ‌ ಶಿಕ್ಷೆ ನೀಡಿದ ಫ್ರಾನ್ಸ್‌

masthmagaa.com:

2015ರಲ್ಲಿ ನಡೆದ ಪ್ಯಾರಿಸ್‌ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಸಲಾಹ್ ಅಬ್ದೆಸ್ಲಾಮ್ ಎಂಬಾತನಿಗೆ ಫ್ರಾನ್ಸ್‌ ಜೀವಾವಧಿ ಶಿಕ್ಷೆಯನ್ನ ನೀಡಿದೆ.ಈ ಮೂಲಕ ಇಂತಹ ಶಿಕ್ಷೆಯನ್ನ ಫ್ರೆಂಚ್ ಕಾನೂನು ಇತಿಹಾಸದಲ್ಲಿಯೇ ಐದನೇ ಬಾರಿಗೆ ನೀಡಲಾಗಿದೆ. ಅಂದ್ಹಾಗೆ ಫ್ರೆಂಚ್‌ ರಾಜಧಾನಿ ಪ್ಯಾರಿಸ್‌ ಮೇಲೆ ದಾಳಿ ಮಾಡಿದ ಉಗ್ರರ ಸೆಲ್‌ನಲ್ಲಿ ಕೇವಲ ಈತನೊಬ್ಬ ಮಾತ್ರ ಬದುಕುಳಿದಿದ್ದ.ಇನ್ನು ಈತನಿಗೆ 30 ವರ್ಷಗಳ ನಂತ್ರ ಒಂದು ಸಣ್ಣ ಪ್ರಮಾಣದ ಪೆರೋಲ್‌ಅನ್ನ ನೀಡುವ ಒಂದು ಸಣ್ಣ ಸಾಧ್ಯತೆ ಇರುತ್ತೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply