“ಎಪ್ರಿಲ್‌ 30ಕ್ಕೆ ಸಲ್ಮಾನ್‌ ಖಾನ್‌ ಕೊಲೆಯಾಗತ್ತೆ”: ರಾಕಿ

masthmagaa.com:

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಮತ್ತೊಂದು ಕೊಲೆ ಬೆದರಿಕೆ ಬಂದಿದೆ. ಇಷ್ಟು ದಿನ ಅವರಿಗೆ ಕೊಲೆ ಬೆದರಿಕೆಗಳು ಪತ್ರಗಳು, ಇ-ಮೇಲ್‌ ಮುಖಾಂತರ ಬಂದಿತ್ತು, ಅಲ್ಲದೇ ಜೈಲಿನಲ್ಲಿ ಇದ್ದುಕೊಂಡೆ ಕ್ರಿಮಿನಲ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಗ್ಯಾಂಗ್ ಕೊಲೆ ಮಾಡೋದಾಗಿ ಹೇಳಿಕೆ ನೀಡಿದ್ದರು. ಇದರ ನಂತರ ಸಲ್ಲು ಭಾಯ್‌ಗೆ ಪೋಲಿಸ್‌ ಪ್ರೊಟೆಕ್ಷನ್‌ ಕೊಡಲಾಗಿತ್ತು. ಹಾಗೆ ಈ ರೀತಿ ಕೊಲೆ ಬೆದರಿಕೆಗಳು ನಿರಂತರವಾಗಿ ಬರ್ತಾ ಇದ್ದ ಬೆನ್ನಲ್ಲೇ ಸಲ್ಲು ಭಾಯ್‌ ಹೊಸ ಬುಲೆಟ್‌ ಪ್ರೂಪ್‌ ಕಾರನ್ನು ಸಹ ಖರೀದಿ ಮಾಡಿದ್ದರು. ಇಂಡಿಯಾದಲ್ಲಿ ಈ ಕಾರ್‌ ಇನ್ನೂ ಲಾಂಚ್‌ ಆಗಿರಲಿಲ್ಲ, ಆದರೂ ಸಹ ದಕ್ಷಿಣ ಏಷ್ಯಾದಿಂದ ಆ ಕಾರನ್ನ ಖರೀದಿಸಿದ್ದರು.

ಇನ್ನು ಸೋಮವಾರ ರಾತ್ರಿ 9 ಗಂಟೆಗೆ ಮುಂಬೈ ಪೊಲೀಸರಿಗೆ ಕರೆ ಮಾಡಿದ ದುಷ್ಕರ್ಮಿ ಎಪ್ರಿಲ್‌ 30ಕ್ಕೆ ಸಲ್ಮಾನ್‌ ಖಾನ್‌ನ್ನ ಕೊಲ್ಲೋದಾಗಿ ಹೇಳಿದ್ದಾರೆ. ಕರೆ ಮಾಡಿದವನನ್ನ ರಾಕಿ ಎಂದು ಪೊಲೀಸರು ಗುರುತಿಸಿದ್ದಾರೆ, ಅಲ್ಲದೇ ಆತ ಜೋಧ್‌ಪುರದನು ಎಂದು ಹೇಳಿದ್ದಾರೆ. ಇದೀಗ ಈ ಬೆದರಿಕೆ ಕರೆ ಬಂದ ನಂತರ ಸಲ್ಮಾನ್‌ ಖಾನ್‌ ಭದ್ರತೆಯನ್ನ ಪೋಲಿಸರು ಇನ್ನಷ್ಟು ಹೆಚ್ಚಿಸಿದ್ದಾರೆ.

-masthmagaa.com

Contact Us for Advertisement

Leave a Reply