“ಸಮಂತಾ ತುಂಬಾ ಒಳ್ಳೆಯವಳು, ಅವಳು ಖುಷಿಯಾಗಿ ಇರಬೇಕು”: ನಾಗಚೈತನ್ಯ!

masthmagaa.com:

ಸೌತ್‌ ಆಕ್ಟರ್‌ ನಾಗಚೈತನ್ಯ ತಮ್ಮ ಮುಂದಿನ “ಕಸ್ಟಡಿ” ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿ ಇದಾರೆ. ಹಲವಾರು ಕಡೆ ಸಂದರ್ಶನದಲ್ಲಿ ಭಾಗವಹಿಸ್ತಾ ಇದಾರೆ. ಹೀಗೆ ಸಂದರ್ಶನವೊಂದರಲ್ಲಿ ಭಾಗವಹಿಸಿ ಸಮಂತಾ ಮತ್ತು ತಮ್ಮ ಡಿವೋರ್ಸ್‌ ಬಗ್ಗೆಮತ್ತು ತಮ್ಮ ಮಾಜಿ ಪತ್ನಿಯನ್ನ ಹಾಡಿಹೊಗಳಿದ್ದಾರೆ.

ಸಂದರ್ಶವೊಂದರಲ್ಲಿ ನೀವು ಡಿವೋರ್ಸ್‌ ನಿಂದ ಹೊರಬಂದಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ನಾಗಚೈತನ್ಯ ಉತ್ತರಕೊಟ್ಟಿದ್ದಾರೆ. “ಹೌದು, ನಾವು ಬೇರೆ ಆಗಿ ಎರಡು ವರ್ಷ ಆಗಿದೆ. ಆದರೆ ಆಫಿಷಿಯಲ್‌ ಆಗಿ ಬೇರೆ ಆಗಿ ಕೇವಲ ಒಂದು ವರ್ಷ ಮಾತ್ರ ಆಗಿದೆ. ನಾವಿಬ್ಬರೂ ಕೂಡ ನಮ್ಮ ಜೀವನದಲ್ಲಿ ಮುಂದಿನ ಹೆಜ್ಜೆಯನ್ನ ಇಟ್ಟಿದ್ದೀವಿ. ನನ್ನ ಜೀವನದಲ್ಲಿ ಬಂದಂತ ಡಿವೋರ್ಸ್‌ ಹಂತದ ಬಗ್ಗೆ ನನಗೆ ತುಂಬಾ ಗೌರವ ಇದೆ. ಸಮಂತಾ ತುಂಬಾ ಒಳ್ಳೆಯವಳು, ಅವಳು ಖುಷಿಯಾಗಿ ಇರಬೇಕು, ಆದರೆ ಮಾಧ್ಯಮದವರು ವಿಚಿತ್ರವಾದ ಹೇಳಿಕೆ ಕೊಟ್ಟಾಗ ತುಂಬಾ ಬೇಜಾರ್‌ ಆಗತ್ತೆ” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply