ಸ್ಯಾಮ್​ಸಂಗ್​ ವೈಸ್ ಚೇರ್​ಮನ್​​ಗೆ ದಂಡ! ಯಾಕೆ ಗೊತ್ತಾ?

masthmagaa.com:

ವಿಶ್ವದ ಅತಿ ದೊಡ್ಡ ಸ್ಮಾರ್ಟ್​​ಫೋನ್ ಕಂಪನಿಯಾದ ಸ್ಯಾಮ್​ಸಂಗ್​​​ ವೈಸ್ ಚೇರ್​ಮನ್ ಲೀ ಜಾಯ್ ಯೊಂಗ್​​​​​ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಅನಸ್ತೇಷಿಯಾಗೆ ಬಳಸೋ Propofol ಔಷಧಿಯನ್ನು ಕಾನೂನು ಬಾಹಿರವಾಗಿ ಬಳಸಿರೋದು ಕೋರ್ಟ್​ನಲ್ಲಿ ದೃಢವಾಗಿದೆ. ಅವರಿಗೆ 60 ಸಾವಿರ ಡಾಲರ್​​​ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 44 ಲಕ್ಷ ರೂಪಾಯಿಯಷ್ಟು ದಂಡ ವಿಧಿಸಲಾಗಿದೆ. ಇವರು ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್​ನಲ್ಲಿರೋ ಪ್ಲಾಸ್ಟಿಕ್ ಸರ್ಜರಿ ಕ್ಲಿನಿಕ್​ನಲ್ಲಿ ನಿರಂತರವಾಗಿ ಈ ಔಷಧವನ್ನು ತಗೊಳ್ತಿದ್ರು ಅಂತ ಪ್ರೂವ್ ಆಗಿದೆ. Propofol ಅನ್ನೋದು ಒಂದು ನಾರ್ಮಲ್ ಅನಸ್ತೇಷಿಯಾ ಔಷಧ. ಆದ್ರೆ ಇದನ್ನು ವಿಪರೀತವಾಗಿ ತಗೊಂಡ್ರೆ ಅಪಾಯ ಕೂಡ ಇರುತ್ತೆ. ಈ ಹಿಂದೆ 2009ರಲ್ಲಿ ಪಾಪ್​ಸ್ಟಾರ್ ಮೈಕಲ್ ಜಾಕ್ಸನ್ ಕೂಡ ಇದೇ ರೀತಿಯ ಔಷಧಿಯ ಓವರ್​ಡೋಸ್​​​ನಿಂದ ಪ್ರಾಣ ಬಿಟ್ಟಿದ್ರು. ಇನ್ನು ಈ ಲೀ ಜಾಯ್ ಯೊಂಗ್​​​ ಈ ಹಿಂದೆಯೂ ಭ್ರಷ್ಟಾಚಾರ ಕೇಸ್​​ನಲ್ಲಿ ಜೈಲಿಗೆ ಹೋಗಿದ್ರು. ಎರಡು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ರು. ಇವರ ಆಸ್ತಿ 10 ಬಿಲಿಯನ್ ಡಾಲರ್​ ಅಂದ್ರೆ 1 ಸಾವಿರ ಕೋಟಿ ಡಾಲರ್​​​ಗೂ ಅಧಿಕವಾಗಿದ್ದು, ಫೋರ್ಬ್ಸ್​​​ನ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 238ನೇ ಸ್ಥಾನದಲ್ಲಿದ್ದಾರೆ.

-masthmagaa.com

Contact Us for Advertisement

Leave a Reply