ಕಾಶ್ಮೀರ ಪಾಕ್​ಗೆ ಬಿಟ್ಟುಕೊಡಿ ಅಂದಿದ್ರಾ ಸರ್ದಾರ್ ಪಟೇಲ್? ಏನಿದು ವಿವಾದ?

masthmagaa.com:

ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ್​ ಭಾಯ್ ಪಟೇಲ್ ಬಗ್ಗೆ ಅಪಮಾನಕರವಾಗಿ ಮಾತನಾಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಸಿಡಬ್ಲ್ಯೂಸಿ ಸಭೆ ಕುರಿತು ನ್ಯೂಸ್​ಪೇಪರ್​​ ಒಂದರ ವರದಿಯನ್ನು ಬಿಜೆಪಿ ಉಲ್ಲೇಖಿಸದೆ. ಅದ್ರಲ್ಲಿ ಸಿಡಬ್ಲ್ಯೂಸಿ ಸಭೆಯಲ್ಲಿ ಜಮ್ಮು ಕಾಶ್ಮೀರ ಕಾಂಗ್ರೆಸ್ ನಾಯಕ ತಾರಿಕ್ ಹಮೀದ್ ಕರ್ರಾ ಭಾಗಿಯಾಗಿದ್ರು. ಈ ವೇಳೆ ಮಾತಾಡಿದ ಅವರು, ಸರ್ದಾರ್ ವಲ್ಲಬ್​ಭಾಯ್ ಪಟೇಲ್ ಜಮ್ಮು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕು ಎಂದಿದ್ರು. ಆದ್ರೆ ನೆಹರು ಅದಕ್ಕೆ ಒಪ್ಪಿರಲಿಲ್ಲ. ಜಮ್ಮು ಕಾಶ್ಮೀರವನ್ನು ಭಾರತಕ್ಕೆ ಸೇರಿಸಿದ್ದು ನೆಹರು ಅಂತ ಹೇಳಿದ್ದಾರೆ. ಜೊತೆಗೆ ಪಟೇಲ್ ಈ ವಿಚಾರವಾಗಿ ಮೊಹ್ಮದ್ ಅಲಿ ಜಿನ್ನಾ ಜೊತೆ ಕೈಜೋಡಿಸಿದ್ರು ಅಂತ ಕೂಡ ಆರೋಪಿಸಿದ್ರು ಅಂತ ವರದಿ ಮಾಡಲಾಗಿದೆ. ಇದನ್ನು ಉಲ್ಲೇಖಿಸಿರೋ ಬಿಜೆಪಿ, ಎಲ್ಲವನ್ನೂ ಒಂದೇ ಕುಟುಂಬ ಮಾಡಿದೆ.. ಬೇರೆಯವರು ಏನೂ ಮಾಡಿಲ್ಲ ಅನ್ನೋದು ಎಂಥಹ ಮನಸ್ಥಿತಿ..? ಸರ್ದಾರ್ ಪಟೇಲ್ ಬಗ್ಗೆ ಈ ರೀತಿ ಹೇಳೋ ಮೂಲಕ ಕಾಂಗ್ರೆಸ್ ಪಾಪ ಮಾಡಿದೆ ಅಂತ ಕಿಡಿಕಾರಿದೆ. ಕಾಂಗ್ರೆಸ್ ತಾರಿಕ್​​ ಹಮೀದ್ ಕರ್ರಾರನ್ನು ತೆಗೆದು ಹಾಕುತ್ತಾ..? ಅಂತ ಪ್ರಶ್ನಿಸಿದೆ.

ಇದ್ರ ಬೆನ್ನಲ್ಲೇ ಸ್ಪಷ್ಟನೆ ನೀಡಿರೋ ತಾರಿಕ್ ಹಮೀದ್​​ ಕರ್ರಾ, ನಾನ್ ಹಾಗೆ ಹೇಳೇ ಇಲ್ಲ. ನಾನು ಇವತ್ತಿನ ನ್ಯೂಸ್​ಪೇಪರ್​ಗಳನ್ನು ನೋಡ್ದೆ. ಅದರಲ್ಲಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ. ತಪ್ಪಾಗಿ ವರದಿ ಮಾಡಲಾಗಿದೆ. ಜವಾಹರ್ ಲಾಲ್​ ನೆಹರು ಭಾರತ ಒಂದು ಧರ್ಮ ಆಧಾರಿತ ದೇಶವಾಗಬಾರದು. ಜಮ್ಮು ಕಾಶ್ಮೀರ ಕೂಡ ಭಾರತಕ್ಕೆ ಸೇರಬೇಕು ಅಂತ ಬಯಸಿದ್ರು. ಆದ್ರೆ ಸರ್ದಾರ್ ಪಟೇಲ್​​ ಜಮ್ಮು ಕಾಶ್ಮೀರ ಪಾಕಿಸ್ತಾನಕ್ಕೆ ಹೋದ್ರೂ ಕೂಡ ಜುನಾಗಡ ಮತ್ತು ಹೈದ್ರಾಬಾದ್​ ಬಗ್ಗೆ ಚರ್ಚೆ ನಡೆಸಬಹುದು ಅಂತ ಹೇಳಿದ್ದರು ಅಂತ ಸ್ಪಷ್ಟಪಡಿಸೋಕೆ ಯತ್ನಿಸಿದ್ದಾರೆ..

ಆದ್ರೆ ಜಮ್ಮು ಕಾಶ್ಮೀರದ ವಿಚಾರದಲ್ಲಿ ಖಡಕ್ ನಿರ್ಧಾರ ತೆಗೆದುಕೊಂಡು, ಅದನ್ನು ಭಾರತದ ಅವಿಭಾಜ್ಯ ಅಂಗವಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇ ಸರ್ದಾರ್ ಪಟೇಲ್.. ಬರೀ ಜಮ್ಮು ಕಾಶ್ಮೀರ ಅಲ್ಲ.. 565 ಸಂಸ್ಥಾನಗಳಲ್ಲಿ ಹರಿದು ಛಿದ್ರವಾಗಿದ್ದ ಭಾರತವನ್ನು ಒಂದು ಮಾಡಿದ್ದೇ ಪಟೇಲ್ ಅನ್ನೋದು ಈ ತಾರಿಕ್ ಹಮೀದ್​​ಗೆ ಗೊತ್ತಿಲ್ಲ ಅನ್ಸುತ್ತೆ.

-masthmagaa.com

Contact Us for Advertisement

Leave a Reply