ಯುಕ್ರೇನ್​​​​ ಗಡಿಯಲ್ಲಿ ರಷ್ಯಾ ಸೀಕ್ರೆಟ್ ಬಯಲು ಮಾಡಿದ ಉಪಗ್ರಹ ಫೋಟೋಸ್!

masthmagaa.com:

ಯುಕ್ರೇನ್​​​​ ಗಡಿಯಲ್ಲಿ ರಷ್ಯಾ ಸೇನೆ ಹೆಚ್ಚಿಸುತ್ತಿದೆ ಅಂತ ಆರೋಪಗಳು ಕೇಳಿ ಬರ್ತಿರುವ ಹೊತ್ತಲ್ಲೇ ಉಪಗ್ರಹ ಚಿತ್ರವೊಂದು ಇದನ್ನು ಬಯಲು ಮಾಡಿದೆ. ಇದ್ರಲ್ಲಿ ರಷ್ಯಾ ಈ ಹಿಂದೆ ತಾನು ಯುಕ್ರೇನ್​​ನಿಂದ ವಶಕ್ಕೆ ಪಡೆದಿದ್ದ ಕ್ರಿಮಿಯಾ ಮತ್ತು ಯುಕ್ರೇನ್ ಗಡಿಯಲ್ಲಿ ಸೇನೆ ಮತ್ತು ಶಸ್ತ್ರಾಸ್ತ್ರ ನಿಯೋಜನೆಯನ್ನು ಹೆಚ್ಚಿಸಿರೋದು ಗೊತ್ತಾಗಿದೆ. ಅಮೆರಿಕದ ಖಾಸಗಿ ಕಂಪನಿಯೊಂದು ತೆಗೆದ ಉಪಗ್ರಹ ಚಿತ್ರ ಇದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ರಷ್ಯಾ, ನಮ್ಮ ಭೂಭಾಗದಲ್ಲಿ ಸೇನೆಯನ್ನು ನಿಯೋಜಿಸಲು ನಮಗೆ ಅಧಿಕಾರ ಇದೆ. ಪಾಶ್ಚಿಮಾತ್ಯ ದೇಶಗಳು ಗಡಿಯಲ್ಲಿ ಪ್ರಚೋದನಾಕಾರಿ ಚಟುವಟಿಕೆಗಳನ್ನು ನಡೆಸ್ತಿರೋದ್ರಿಂದ ಹೀಗೆ ಮಾಡಿದ್ದೀವಿ ಅಷ್ಟೆ ಅಂತ ಹೇಳಿದೆ. ಈಗಾಗಲೇ ಅಮೆರಿಕದ ಗುಪ್ತಚರ ಸಂಸ್ಥೆ ರಷ್ಯಾ ಯುಕ್ರೇನ್ ಗಡಿಯಲ್ಲಿ ಸೇನೆ ಹೆಚ್ಚಿಸ್ತಿದ್ದು, ಮುಂದಿನ ತಿಂಗಳಲ್ಲಿ ದಾಳಿ ನಡೆಸುತ್ತೆ ಅಂತ ಎಚ್ಚರಿಸಿದೆ. ಅದ್ರ ಬೆನ್ನಲ್ಲೇ ಈ ಫೋಟೋ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಸದಯ್ದಲ್ಲೇ ಅಮೆರಿಕ ಮತ್ತು ರಷ್ಯಾ ನಡುವೆ ಮಾತುಕತೆ ಕೂಡ ನಡೆಯಲಿದೆ.

-masthmagaa.com

Contact Us for Advertisement

Leave a Reply