ರಮೇಶ್ ವಿರುದ್ಧ ಸತೀಶ್ ಜಾರಕಿಹೊಳಿ ಧ್ವನಿಸುರುಳಿಯ ಅಸ್ತ್ರ..!

ಉಪಚುನಾವಣೆ ಹೊಸ್ತಿಲಲ್ಲಿ ಬೆಳಗಾವಿಯ ಗೋಕಾಕ್ ಕ್ಷೇತ್ರದಲ್ಲಿ ಸಹೋದರರ ಗುದ್ದಾಟ ಜೋರಾಗಿದೆ. ರಮೇಶ್ ಜಾರಕಿಹೊಳಿ ವಿರುದ್ಧ ಸತೀಶ್ ಜಾರಕಿಹೊಳಿ ವ್ಯಂಗ್ಯದ ಹಾಡು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಗೋಕಾಕ್ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅವರ ಅಳಿಯ ಅಂಬಿರಾವ್‍ಗೆ ಟಾಂಗ್ ಕೊಟ್ಟಿದ್ದಾರೆ. ಕಥೆಯ ಕೇಳಿರಣ್ಣಾ.. ಎಂದು ಶುರುವಾಗುವ ಈ ಧ್ವನಿಸುರುಳಿಯಲ್ಲಿ, ಗೋಕಾಕ್ ನಗರಸಭೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಪ್ರವಾಹ, ಗೋಕಾಕ್ ಕ್ಷೇತ್ರದಲ್ಲಿ ಮನೆ ಕಳೆದುಕೊಂಡವರ ಪರಿಸ್ಥಿತಿ ಎಲ್ಲವನ್ನೂ ಉಲ್ಲೇಖಿಸಲಾಗಿದೆ.

ರಮೇಶ್ ಜಾರಕಿಹೊಳಿ ಬಂಡೆದ್ದು ಹೋಗಿ ರಾಜೀನಾಮೆ ನೀಡಿದ ಬಳಿಕ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ನಡುವಿನ ಯುದ್ಧ ಜೋರಾಗಿದೆ. ಉಪಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಗೋಕಾಕ್ ಕ್ಷೇತ್ರದಲ್ಲಿ ಸಹೋದರ ಲಖನ್ ಜಾರಕಿಹೊಳಿಯನ್ನು ಕಾಂಗ್ರೆಸ್‍ನಿಂದ ನಿಲ್ಲಿಸಿ, ಗೆಲ್ಲಿಸಬೇಕು ಅನ್ನೋದು ಸತೀಶ್ ಜಾರಕಿಹೊಳಿ ಲೆಕ್ಕಾಚಾರ. ಆದ್ರೆ ಸಾಹುಕಾರ ರಮೇಶ್ ಜಾರಕಿಹೊಳಿ ಕೂಡ ತಾವೇನೂ ಕಮ್ಮಿಯಿಲ್ಲ ಎಂಬಂತೆ ಸಮಾವೇಶ ನಡೆಸಿ, ಶಕ್ತಿ ಪ್ರದರ್ಶಿಸಿದ್ದರು.

Contact Us for Advertisement

Leave a Reply