ಸೌದಿ ಅರೇಬಿಯಾದಲ್ಲಿ ಮಹಿಳೆಯರು ಓಡಿಸಲಿದ್ದಾರೆ ಬುಲೆಟ್‌ ಟ್ರೇನ್!

masthmagaa.com:

ಸೌದಿ ಅರೇಬಿಯಾದಲ್ಲಿ 30 ಮಹಿಳಾ ಟ್ರೇನ್ ಡ್ರೈವರ್ಸ್​ ಹುದ್ದೆಗೆ ಸುಮಾರು 28 ಸಾವಿರ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಇದು ಮಹಿಳೆಯರ ಉದ್ಯೋಗದ ಮೇಲಿನ ಕೆಲವೊಂದು ನಿರ್ಬಂಧಗಳನ್ನ ಸೌದಿ ಅರೇಬಿಯಾ ಸಡಿಲ ಮಾಡ್ತಿರೋ ಸಂಕೇತ ಅಂತಾನೇ ಹೇಳಲಾಗ್ತಿದೆ. ಅಂದ್ಹಾಗೆ ಸ್ಪೇನ್​ ಮೂಲದ ರೈಲ್ವೆ ಆಪರೇಟರ್ ಕಂಪನಿಯಾದ ರೆನ್​ಫೆ (Renfe) 30 ಮಹಿಳಾ ಟ್ರೇನ್​ ಡ್ರೈವರ್ಸ್​ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಇದೀಗ 28 ಸಾವಿರ ಅರ್ಜಿಗಳಲ್ಲಿ ಅಕಾಡೆಮಿಕ್​ ಬ್ಯಾಗ್ರೋಂಡ್​ ಮತ್ತು ಇಂಗ್ಲಿಷ್​ ಲಾಂಗ್ವೇಜ್​​ ಸ್ಕಿಲ್ಸ್ ಅನ್ನ ಪರಿಗಣಿಸಿ ಅರ್ಜಿಗಳನ್ನ ಸಾರ್ಟ್​​ಔಟ್​ ಮಾಡಿದ್ದರಿಂದ ಅರ್ಜಿದಾರರ ಸಂಖ್ಯೆ 14 ಸಾವಿರಕ್ಕೆ ಇಳಿದೆ ಅಂತ ರೆನ್​ಫಿ ತಿಳಿಸಿದೆ. ಇದನ್ನ 30ಕ್ಕೆ ಇಳಿಸೋ ಕೆಲಸ ಮಾರ್ಚ್​ ಒಳಗೆ ಮುಗಿಯಲಿದೆ. ಸೆಲೆಕ್ಟ್ ಆಗೋ 30 ಮಹಿಳೆಯರು ಮೆಕ್ಕಾದಿಂದ ಮದೀನಾ ನಗರಕ್ಕೆ ಬುಲೆಟ್​ ಟ್ರೇನ್​​ಗಳನ್ನ​ ಓಡಿಸ್ತಾರೆ.

-masthmagaa.com

Contact Us for Advertisement

Leave a Reply