ಸೌದಿ ಅರೇಬಿಯಾದಲ್ಲಿ ಹೌತಿ ಬಂಡುಕೋರರ ದಾಳಿ!

masthmagaa.com:

ಸೌದಿ ಅರೇಬಿಯಾದಲ್ಲಿ ಹೌತಿ ಬಂಡುಕೋರರ ಹಾವಳಿ ಜೋರಾಗಿದೆ. ಸೌದಿಯ ದಕ್ಷಿಣ ಭಾಗದ ನಾಲ್ಕು ಕಡೆ ಹೌತಿಗಳು ಶನಿವಾರ ದಾಳಿ ನಡೆಸಿದ್ದಾರೆ ಅಂತ ಸೌದಿ ಹೇಳಿದೆ. ಜಿಝಾನ್​​ ಪ್ರದೇಶದಲ್ಲಿದ್ದ ಅರಾಮ್ಕೊ ಆಯಿಲ್​ ಕಂಪನಿಯ ಕಟ್ಟಡ ಮೇಲೂ ದಾಳಿ ನಡೆದಿದೆ. ಉಳಿದಂತೆ ಅಲ್​ ಶಕೀಕ್​ನಲ್ಲಿರೋ​ ನಿರ್ಲವಣೀಕರಣ ಘಟಕ, ದಹರನ್​ ಅಲ್ ಜನೌಬ್​ನಲ್ಲಿನ ಪವರ್ ಸ್ಟೇಷನ್​ ಮತ್ತು ಖಾಮಿಸ್​ ಮುಶೈರ್​ನ ಗ್ಯಾಸ್​ ಸ್ಟೇಷನ್​​ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ ಯಾವ್ದೇ ಪ್ರಾಣಹಾನಿಯಾಗಿಲ್ಲ. ಇದರ ಬೆನ್ನಲ್ಲೇ ಈ ಪ್ರದೇಶದಲ್ಲಿ ನಾಲ್ಕು ಡ್ರೋನ್​ಗಳನ್ನ ಹಾರಿಸಲಾಗಿದೆ ಅಂತ ಸೌದಿ ಹೇಳಿದೆ.

-masthmagaa.com

Contact Us for Advertisement

Leave a Reply