ಸೌದಿಯತ್ತ ಕ್ಷಿಪಣಿ ಹಾರಿಸಿದ ಹೌತಿಗಳು! ಆಮೇಲೆ..?

masthmagaa.com:

ಸೌದಿ ಅರೇಬಿಯಾದ ಮೇಲೆ ಯೆಮನ್​​ನ ಹೌತಿ ಬಂಡುಕೋರರು ಮತ್ತೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಆದ್ರೆ ಸೌದಿಯ ದಮ್ಮನ್ ನಗರದ ಮೇಲ್ಭಾಗದಲ್ಲಿ ಈ ಕ್ಷಿಪಣಿಯನ್ನು ಹೊಡೆದುರುಳಿಸಲಾಗಿದೆ ಅಂತ ಸೌದಿ ತಿಳಿಸಿದೆ. ಘಟನೆಯಲ್ಲಿ 14 ಮನೆಗಳಿಗೆ ಸಣ್ಣಪುಟ್ಟ ಹಾನಿಯಾಗಿದ್ದು, ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಅಂತ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇಷ್ಟೇ ಅಲ್ಲ..ಜಝನ್ ಮತ್ತು ನಜ್ರನ್ ನಗರದ ಮೇಲೆ ಹಾರಿಸಲಾದ ಕ್ಷಿಪಣಿ ಮತ್ತು ಸ್ಫೋಟಕ ಹೊತ್ತು ಬರುತ್ತಿದ್ದ ಡ್ರೋನ್​ನ್ನು ಕೂಡ ತಡೆದಿರೋದಾಗಿ ಸೌದಿ ತಿಳಿಸಿದೆ. ಆದ್ರೆ ಹೌತಿ ಬಂಡುಕೋರರು ಇನ್ನೂ ಈ ದಾಳಿ ಹೊಣೆ ಹೊತ್ತುಕೊಂಡಿಲ್ಲ. ಅಂದಹಾಗೆ ಈ ಹೌತಿ ಬಂಡುಕೋರರು ಯೆಮನ್ ಸರ್ಕಾರದ ವಿರುದ್ಧ ಹೋರಾಡ್ತಿದ್ದು, ಯೆಮನ್ ಸರ್ಕಾರಕ್ಕೆ ಸೌದಿ ನೇತೃತ್ವದ ಮಿತ್ರಪಡೆ ಬೆಂಬಲ ನೀಡ್ತಿದೆ. ಹೀಗಾಗಿ ಹೌತಿಗಳು ಆಗಾಗ ಸೌದಿ ಮೇಲೆ ದಾಳಿ ನಡೆಸ್ತಿರ್ತಾರೆ.

-masthmagaa.com

Contact Us for Advertisement

Leave a Reply