ಪ್ರಧಾನಿ ಮೋದಿ ಭದ್ರತಾ ವೈಫಲ್ಯ! ಸುಪ್ರೀಂಕೋರ್ಟ್ ಹೇಳಿದ್ದೇನು

masthmagaa.com:

ಈ ಸಂಬಂಧ ಇವತ್ತು ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆ ನಡೆದಿದೆ. ಪ್ರಕರಣ ಸಂಬಂಧ ಎನ್​​ಐಎ ತನಿಖೆ ನಡೆಸಬೇಕು ಅಂತ ವಾದಿಸಿದ ಕೇಂದ್ರ ಸರ್ಕಾರ, ಈ ರೀತಿ ಪ್ರಧಾನಿಗೆ ಭದ್ರತಾ ವೈಫಲ್ಯ ಆಗಿರೋದು ಅಪರೂಪದಲ್ಲಿ ಅಪರೂಪ. ಈ ಘಟನೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಕಾರಣವಾಗಿರೋ ಪ್ರಕರಣ.. ಇದ್ರಿಂದ ಪ್ರಧಾನಿ ಮೋದಿ ಭದ್ರತೆಗೆ ಗಂಭೀರ ಮತ್ತು ಸವಾಲಿನ ಪರಿಸ್ಥಿತಿಯನ್ನು ಸೃಷ್ಟಿಯಾಗಿದೆ. ಇದಕ್ಕೆ ಪಂಜಾಬ್ ಸರ್ಕಾರ ಮತ್ತು ಪೊಲೀಸರನ್ನು ಹೊಣೆ ಮಾಡ್ಬೇಕು ಅಂತ ಹೇಳ್ತು. ಪ್ರತಿಯಾಗಿ ವಾದಿಸಿದ ಪಂಜಾಬ್ ಸರ್ಕಾರ, ನಾವು ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೀವಿ. ಈಗಾಗಲೇ ತನಿಖೆಗೆ ಆದೇಶಿಸಿದ್ದೀವಿ. ಪ್ರಧಾನಿ ನಮಗೂ ಪ್ರಧಾನಿ ಅಂತ ಸಿಎಂ ಕೂಡ ಹೇಳಿದ್ದಾರೆ. ನಾವು ಎಲ್ಲಾ ರೀತಿಯ ತನಿಖೆಗೆ ಸಿದ್ಧ. ಕೋರ್ಟೇ ನಿರ್ಧರಿಸಲಿ ಅಂತ ಹೇಳ್ತು. ವಾದ ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಎನ್​ವಿ ರಮಣ, ಪ್ರಧಾನಿ ಮೋದಿ ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳು, ಈವರೆಗಿನ ತನಿಖೆಯಲ್ಲಿ ಪತ್ತೆಯಾದ ಅಂಶಗಳನ್ನು ಸುರಕ್ಷಿತವಾಗಿ ಇಡುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್​ನ ರಿಜಿಸ್ಟ್ರಾರ್ ಜನರಲ್​​ಗೆ ಸೂಚಿಸಿದೆ. ಪಂಜಾಬ್ ಪೊಲೀಸರು, ಎಸ್​ಪಿಜಿ ರಿಜಿಸ್ಟ್ರಾರ್ ಜನರಲ್​​ಗೆ ಈ ಕಾರ್ಯದಲ್ಲಿ ಹೆಲ್ಪ್ ಮಾಡಿ ಅಂತ ಹೇಳಿದೆ. ಜೊತೆಗೆ ಪಂಜಾಬ್ ಮತ್ತು ಕೇಂದ್ರ ಸರ್ಕಾರದಿಂದ ಆದೇಶಿಸಲಾಗಿರೋ ತನಿಖೆಯನ್ನು ಸೋಮವಾರದವರೆಗೆ ಸ್ಥಗಿತಗೊಳಿಸುವಂತೆ ಕೂಡ ಆದೇಶಿಸಿದೆ.

-masthmagaa.com

Contact Us for Advertisement

Leave a Reply