ಬಿಜೆಪಿ ಸೇರಿ 9 ಪಕ್ಷಗಳಿಗೆ ಸುಪ್ರೀಂಕೋರ್ಟ್ ದಂಡ: ಯಾಕೆ ಗೊತ್ತಾ?

masthmagaa.com:

ಆಡಳಿತಾರೂಢ ಪಕ್ಷ ಬಿಜೆಪಿ ಸೇರಿದಂತೆ ಒಟ್ಟು 9 ಪಕ್ಷಗಳಿಗೆ ಇವತ್ತು ಸುಪ್ರೀಂಕೋರ್ಟ್​ ದಂಡ ವಿಧಿಸಿದೆ. ಕ್ರಿಮಿನಲ್​ ಹಿನ್ನೆಲೆಯುಳ್ಳ ಚುನಾವಣಾ ಅಭ್ಯರ್ಥಿಗಳ ಲಿಸ್ಟ್ ಬಹಿರಂಗ ಮಾಡದ ಕಾರಣಕ್ಕೆ ಬಿಜೆಪಿ, ಕಾಂಗ್ರೆಸ್ ಮತ್ತು ಇತರೆ 5 ಪಕ್ಷಗಳಿಗೆ ತಲಾ ಒಂದೊಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಅದೇ ಸಿಪಿಎಂ ಮತ್ತು ಎನ್​ಸಿಪಿಗೆ ಕಳೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ತನ್ನ ಆದೇಶ ಫಾಲೋ ಮಾಡದೇ ಇರೋದಕ್ಕೆ ತಲಾ ಐದೈದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಜೊತೆಗೆ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯನ್ನು ಅವರು ಆಯ್ಕೆಯಾದ 48 ಗಂಟೆಗಳ ಒಳಗಾಗಿ ತಮ್ಮ ವೆಬ್​ಸೈಟ್​​ಗಳಲ್ಲಿ ತೋರಿಸಬೇಕು. ಮತ್ತು ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ಯಾಕೆ ಆಯ್ಕೆ ಮಾಡಿದ್ವಿ ಅನ್ನೋ ಮಾಹಿತಿ ಕೂಡ ನೀಡ್ಬೇಕು ಅಂತ ಹೇಳಿದೆ. ಅದೇ ರೀತಿ ಚುನಾವಣಾ ಆಯೋಗ ಒಂದು ಆ್ಯಪ್ ರಚಿಸಿ, ಅದ್ರಲ್ಲಿ ಅಭ್ಯರ್ಥಿಗಳ ಕ್ರಿಮಿನಲ್ ದಾಖಲೆಗಳ ಮತದಾರರಿಗೆ ತಲುಪುವಂತೆ ನೋಡಿಕೊಳ್ಳಬೇಕು ಅಂತಲೂ ಸೂಚಿಸಿದೆ. ಅಂದಹಾಗೆ ಕಳೆದ ವರ್ಷ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್​​​ ಬಿಹಾರ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಒಂದು ತೀರ್ಪು ನೀಡಿತ್ತು. ಅದರಂತೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ದಾಖಲೆಗಳನ್ನು ಬಹಿರಂಗಪಡಿಸಬೇಕಿತ್ತು. ಆದ್ರೆ ಕೆಲವೊಂದು ಪಕ್ಷಗಳು ಬಹಿರಂಗಪಡಿಸಿರಲಿಲ್ಲ. ಹೀಗಾಗಿ ಈ ಪಕ್ಷಗಳ ಸಿಂಬಲ್​ನ್ನು ಅಮಾನತು ಮಾಡ್ಬೇಕು ಅಂತ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿತ್ತು.

-masthmagaa.com

Contact Us for Advertisement

Leave a Reply