ನಾಗಾಲ್ಯಾಂಡ್‌, ತ್ರಿಪುರಾ ಹಾಗೂ ಮೇಘಾಲಯ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಬಿಡುಗಡೆ!

masthmagaa.com:

2023ರಲ್ಲಿ ನಡೆಯಲಿರುವ ನಾಗಾಲ್ಯಾಂಡ್‌, ತ್ರಿಪುರಾ ಹಾಗೂ ಮೇಘಾಲಯ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನ ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದೆ. ತ್ರಿಪುರದಲ್ಲಿ ಫೆಬ್ರವರಿ 16ಕ್ಕೆ ಚುನಾವಣೆ ನಡೆಯಲಿದೆ. ಮೇಘಾಲಯ ಹಾಗೂ ನಾಗಾಲ್ಯಾಂಡ್‌ನಲ್ಲಿ ಫೆಬ್ರವರಿ 27ಕ್ಕೆ ಚುನಾವಣೆ ನಡೆಯಲಿದೆ ಅಂತ ಚುನಾವಣಾ ಆಯೋಗ ಹೇಳಿದೆ. 3 ಚುನಾವಣೆಗಳ ಮತಎಣಿಕೆ ಮಾರ್ಚ್‌ 2 ರಂದು ನಡೆದು, ಫಲಿತಾಂಶ ಹೊರಬೀಳಲಿದೆ. ಇನ್ನು ಈ ಮೂರು ರಾಜ್ಯಗಳಲ್ಲಿ ತಲಾ 60 ವಿಧಾನಸಭಾ ಕ್ಷೇತ್ರಗಳಿವೆ. 3 ರಾಜ್ಯಗಳಲ್ಲಿ ಒಟ್ಟು 62.8 ಲಕ್ಷಕ್ಕೂ ಅಧಿಕ ಮತದಾರರಿದ್ದು, ಇದ್ರಲ್ಲಿ 1.76 ಲಕ್ಷಕ್ಕೂ ಹೆಚ್ಚು ಮತದಾರರು ಮೊದಲ ಬಾರಿ ಮತ ಚಲಾಯಿಸಲಿದ್ದಾರೆ ಅಂತ ಚುನಾವಣಾ ಆಯೋಗ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply