ಆಗಸ್ಟ್‌ 23ರಿಂದ ಶಾಲೆ ಶುರು.. ಏನೆಲ್ಲಾ ರೂಲ್ಸ್‌ ಇರುತ್ತೆ ಗೊತ್ತಾ?

masthmagaa.com:

ಆಗಸ್ಟ್‌ 23ರಿಂದ ಪ್ರೌಢಶಾಲೆ ಅಂದ್ರೆ 9 ರಿಂದ 10ನೇ ತರಗತಿ ಮತ್ತು ಪಿಯುಸಿ ಭೌತಿಕ ತರಗತಿಗಳು ಆರಂಭಿಸುವ ಸಂಬಂಧ ಗೈಡ್​ಲೈನ್ಸ್​ ಬಿಡುಗಡೆ ಮಾಡಲಾಗಿದೆ. ಇದ್ರ ಪ್ರಕಾರ ಮಕ್ಕಳಿಗೆ ಮಾಸ್ಕ್‌ ಕಡ್ಡಾಯ. ಪಾಸಿಟಿವಿಟಿ ದರ 2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ಶುರು.. ಉಳಿದ ಭಾಗಗಳಲ್ಲಿ ನಂತರದಲ್ಲಿ ನಿರ್ಧಾರ.. ಶಾಲೆಯನ್ನು ಸಾನಿಟೈಸ್ ಮಾಡಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಶಿಕ್ಷಕರು ಮಾಸ್ಕ್ ಧರಿಸ್ಬೇಕು, 50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ ಶೀಲ್ಡ್ ಧರಿಸಬೇಕು, ಅಡುಗೆ ಮನೆ ಮತ್ತು ದಾಸ್ತಾನು ವಸ್ತುಗಳನ್ನು ಸಂಪೂರ್ಣವಾಗಿ ಕ್ಲೀನ್ ಮಾಡಬೇಕು, ಬಿಸಿ ನೀರಿನ ವ್ಯವಸ್ಥೆ ಮಾಡಬೇಕು, ಸಾಮಾಜಿಕ ಅಂತರ ಪಾಲಿಸುವ ಪೋಸ್ಟರ್ ಅಳವಡಿಕೆ ಮಾಡಬೇಕು, ಪ್ರತಿದಿನ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಆರೋಗ್ಯದ ಮಾಹಿತಿ ದಾಖಲಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತ ರೀತಿಯಲ್ಲಿ ಶಿಕ್ಷಣ ಒದಗಿಸಬೇಕು. ಶಿಕ್ಷಕರು ಕನಿಷ್ಠ ಒಂದು ಸಾರಿಯಾದರೂ ಲಸಿಕೆ ಪಡೆದುಕೊಂಡಿದ್ದಾರೆಯೇ? ಎಂಬುದನ್ನು ಪರಿಶೀಲಿಸಬೇಕು. ಕೊರೋನಾ ನಿಯಮಗಳು ಪಾಲನೆಯಾಗುತ್ತ ಇದೆಯೇ? ಇಲ್ಲವೇ? ಎಂಬುದರ ಮೇಲ್ವಿಚಾರಣೆ ಯನ್ನು ನೋಡಲ್‌ ಅಧಿಕಾರಿಗಳು ಮಾಡ್ಬೇಕು. ಇದ್ರಲ್ಲಿ9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೆಳಗ್ಗೆ10ರಿಂದ ಮಧ್ಯಾಹ್ನ ಒಂದೂವರೆವರೆಗೆ ತರಗತಿ ನಡೆಯಲಿದೆ.

-masthmagaa.com

Contact Us for Advertisement

Leave a Reply