ಮಶ್ರೂಮ್‌ ತಿಂದು ಜೀವ ಬಿಟ್ಟ ಅಫ್ಘನ್‌ ಬಾಲಕರು!

masthmagaa.com:

ಅಫ್ಘಾನಿಸ್ತಾನದಿಂದ ಸ್ಥಳಾಂತರ ಪ್ರಕ್ರಿಯೆಯಲ್ಲಿ ಪೋಲೆಂಡ್​​​ಗೆ ಶಿಫ್ಟ್ ಆಗಿದ್ದ ಇಬ್ಬರು ಸಹೋದರರು ವಿಷಕಾರಿ ಮಶ್ರೂಮ್ ಸೇವಿಸಿ ಪ್ರಾಣ ಬಿಟ್ಟಿದ್ದಾರೆ. ನಿನ್ನೆ 5 ವರ್ಷದ ಓರ್ವ ಬಾಲಕ ಪ್ರಾಣ ಬಿಟ್ರೆ, ಇವತ್ತು ಆತನ 6 ವರ್ಷದ ಸಹೋದರ ಸಾವನ್ನಪ್ಪಿದ್ದಾನೆ. ಇವರನ್ನು ಆಗಸ್ಟ್​ 23ರಂದು ಪೋಲೆಂಡ್​​ನ ಪಡ್ಕೊವಾಗೆ ಸ್ಥಳಾಂತರ ಮಾಡಲಾಗಿತ್ತು. ಮರುದಿನವೇ ಇವರಿಬ್ಬರು ಬಾಲಕರ ಜೊತೆಗೆ 17 ವರ್ಷದ ಸಹೋದರಿ ಕೂಡ ಮಶ್ರೂಮ್ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿದ್ರು. ಇವರ ಪೈಕಿ 17 ವರ್ಷದ ಯುವತಿ ಗುಣಮುಖರಾಗಿದ್ದು, ಬಾಲಕರಿಬ್ಬರು ಪ್ರಾಣ ಬಿಟ್ಟಿದ್ದಾರೆ. ಸದ್ಯ ಘಟನೆ ಸಂಬಂಧ ತನಿಖೆ ಶುರು ಮಾಡಿದೀವಿ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply