ಕೊರಿಯರ್ ಮೂಲದ ಮಾದಕ ವಸ್ತು ಸಾಗಾಟ ಭೇದಿಸಿದ ಎನ್​ಸಿಬಿ!

masthmagaa.com:

ಕೊರಿಯರ್ ಮೂಲಕ ಮಾದಕ ವಸ್ತು ಸಾಗಾಟ ಮಾಡ್ತಿದ್ದ ಜಾಲವನ್ನ ಬೆಂಗಳೂರಿನ NCB ಅಧಿಕಾರಿಗಳು ಭೇದಿಸಿದ್ದಾರೆ. ಒಂದು ಕೆಜಿಗೂ ಅಧಿಕ ನಶಾ ಸಾಮಾಗ್ರಿ ಸೀಜ್ ಮಾಡಲಾಗಿದ್ದು ಇಬ್ಬರನ್ನ ಬಂಧಿಸಲಾಗಿದೆ. ಕಳೆದ ತಿಂಗಳು ಕೂಡ ಆಸ್ಟ್ರೇಲಿಯಾಗೆ ರವಾನೆ ಆಗ್ತಿದ್ದ 2ವರೆ ಕೆಜಿ ನಶಾ ಸಾಮಾಗ್ರಿಯನ್ನ ಬೆಂಗಳೂರಿನಲ್ಲಿ ಸೀಜ್ ಮಾಡಲಾಗಿತ್ತು. ಯಾವ್ದೋ ಒಂದೊಂದು ಹಿಡಿದ್ರೆ ಸಾಕಾಗಲ್ಲ ಸ್ವಾಮೀ.. ಬೆಂಗಳೂರು ನಶಾ ಲೋಕ ಆಗೋಗ್ತಿದೆ. ಬೀದಿ ಬೀದಿಗಳಲ್ಲಿ ಹಾಡಹಗಲೇ ಸಣ್ ಸಣ್ ಹುಡುಗ್ರು ನಶೆ ಮಾಡ್ತಾ ತೇಲೋದನ್ನ ನಾವು ದಿನವೂ ನೋಡ್ತಿದಿವಿ. ಅಷ್ಟು ಹದಗೆಟ್ಟು ಹೋಗಿದೆ ಸ್ಥಿತಿ.

-masthmagaa.com

Contact Us for Advertisement

Leave a Reply