130 ಮಹಿಳೆರನ್ನು ಕೊಂದ ಆರೋಪ ಹೊತ್ತಿದ್ದ ಕಿಲ್ಲರ್‌ ಸಾವು

masthmagaa.com:

ಸುಮಾರು 130 ಮಹಿಳೆಯರನ್ನು ಕೊಲೆಗೈದ ಆರೋಪ ಹೊತ್ತಿದ್ದ 77 ವರ್ಷದ ರಾಡ್ನಿ ಜೇಮ್ಸ್ ಅಲ್ಕಾಲ ಪ್ರಾಣ ಕಳೆದುಕೊಂಡಿದ್ದಾನೆ. ಈತ ದಿ ಡೇಟಿಂಗ್‌ ಗೇಮ್‌ ಕಿಲ್ಲರ್‌ ಅಂತಾನೇ ಫೇಮಸ್ ಆಗಿದ್ದ. ಹಲವು ಕೊಲೆ ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿ ಮರಣದಂಡನೆ ಶಿಕ್ಷೆಗೂ ಗುಡಿಯಾಗಿರೋ ಈತ, ಕ್ಯಾಲಿಫೋರ್ನಿಯಾದ ಸ್ಯಾನ್‌ ಜೋವಾಕ್ವಿನ್‌ ವ್ಯಾಲಿಯ ಆಸ್ಪತ್ರೆಯೊಂದರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಅಮೆರಿಕದಲ್ಲಿ 1978ರಲ್ಲಿ ನಡೆಯುತ್ತಿದ್ದ ‘ದಿ ಡೇಟಿಂಗ್‌ ಗೇಮ್‌’ ಶೋನಲ್ಲಿ ಈತ ಭಾಗವಹಿಸಿದ್ದ. ಇದಾದ ಬಳಿಕ 1977ರಿಂದ 1979ರ ಅವಧಿಯಲ್ಲಿ ನಡೆದ 5 ಕೊಲೆಗಳಿಗೆ ಸಂಬಂಧಿಸಿದಂತೆ ಕೇಸ್ ದಾಖಲಾದ ಬಳಿಕ ದಿ ಡೇಟಿಂಗ್ ಗೇಮ್ ಕಿಲ್ಲರ್ ಅಂತಲೇ ಕರೆಯೋಕೆ ಶುರು ಮಾಡಲಾಯ್ತು. ಈತ ಒಟ್ಟು 130 ಮಹಿಳೆಯರ ಕೊಲೆ ಮಾಡಿದ್ಧಾನೆ ಅನ್ನೋದು ಪೊಲೀಸರ ಆರೋಪ. ಆದ್ರೆ ಈವರೆಗೆ ಒಟ್ಟು 5 ಕೇಸ್​​ಗಳಲ್ಲಿ ಮಾತ್ರವೇ ಆರೋಪ ಸಾಬೀತಾಗಿದೆ.

-masthmagaa.com

Contact Us for Advertisement

Leave a Reply