ಮಗನ ಜೊತೆ ಬಟ್ಟೆ ಆಡ್‌ನಲ್ಲಿ ಕಾಣಿಸಿಕೊಂಡ ಶಾರುಖ್‌ ಖಾನ್‌!

masthmagaa.com:

ಬಾಲಿವುಡ್‌ ನಟ ಶಾರುಖ್‌ ಖಾನ್‌ ಮತ್ತು ಅವರ ಮಗ ಆರ್ಯನ್‌ ಖಾನ್‌ ಸದ್ಯ ಬ್ರೇಕಿಂಗ್‌ ನ್ಯೂಸ್‌ನಲ್ಲಿ ಇದಾರೆ. ಆರ್ಯನ್‌ ಖಾನ್‌ ನಿರ್ದೇಶಿಸಿದ ಮತ್ತು ಶಾರುಖ್‌ ಖಾನ್‌ ನಟಿಸಿದ ಆಡ್‌ನಲ್ಲಿ ತಮ್ಮ ಹೊಸ ಬ್ರ್ಯಾಂಡ್‌ನ ಬಟ್ಟೆಗಳ ಮಾರಾಟದ ಬಗ್ಗೆ ಹೇಳಿದ್ದಾರೆ. ಜಾಕೆಟ್‌ಗಳು ಮತ್ತು ಟೀ-ಶರ್ಟ್‌ ಇರುವ ಈ ಬ್ರ್ಯಾಂಡ್‌ನ ಬಟ್ಟೆಗಳು ಶಾರುಖ್‌ ಖಾನ್‌ ಅವರ ಆಟೋಗ್ರಾಫ್‌ನ್ನ ಕೂಡ ಹೊಂದಿದೆ. ಆಟೋಗ್ರಾಫ್‌ ಇರುವ ಪ್ರತಿ ಜಾಕೆಟ್‌ನ ಬೆಲೆ ಬರೊಬ್ಬರಿ 2 ಲಕ್ಷ ರೂಪಾಯಿಗಳ ತನಕ ಇತ್ತು. ಆದರೂ ಸಹ ಕೆಲವೇ ಕೆಲವು ನಿಮಿಷಗಳಲ್ಲಿ ಇದು ಮಾರಾಟ ಆಗಿದೆ.

ಶಾರುಖ್‌ ಖಾನ್‌ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಇದರ ಬಗ್ಗೆ ಹೇಳಿದ್ದಾರೆ. “ಥ್ಯಾಂಕ್ಸ್‌ ಫಾರ್‌ ದಿ ರೈಡ್‌, 25 ಸಾವಿರ ಮತ್ತು 47 ಸಾವಿರ ಬೆಲೆಯ ಜಾಕೆಟ್‌ ಮತ್ತು ಟೀ-ಶರ್ಟ್‌ಗಳ ಬೇಡಿಕೆ ಜಾಸ್ತಿ ಇದೆ. ಒಂದೇ ಸಲ ಕಂಪನಿಯ ವೆಬ್‌ ಸೈಟ್‌ ಕೂಡ ಕ್ರ್ಯಾಶ್‌ ಆಗಿತ್ತು. ಸದ್ಯಕ್ಕೆ ಎಲ್ಲಾ ಸೋಲ್ಡ್‌ ಔಟ್‌ ಆಗಿದೆ. ಮತ್ತೆ ಹೊಸ ಬಟ್ಟೆಗಳೊಂದಿಗೆ ಬರ್ತೀವಿ” ಅಂತ ಹೇಳಿದ್ದಾರೆ.

ಇನ್ನು ಕೆಲವರು ಸೋಷಿಯಲ್‌ ಮೀಡಿಯಾದಲ್ಲಿ “ಸಿಕ್ಕಾಪಟ್ಟೆ ರೇಟ್‌ ಜಾಸ್ತಿ ಇದೆ” ಅಂತ ಹೇಳಿದ್ರೆ, ಇನ್ನೂ ಕೆಲವರು “ಶಾರುಖ್‌ ಖಾನ್‌ ಸಹಿ ಇರುವ ಈ ಜಾಕೆಟ್‌ಗಳನ್ನ ವಾಶ್‌ ಮಾಡಿದ್ರೆ ಸಹಿ ಹೋಗತ್ತೆ ಹಾಗಾಗಿ ನಾನು ವಾಶ್‌ ಮಾಡೋದಿಲ್ಲ” ಅಂತ ಕಾಮೆಂಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply