ಉತ್ಸವಕ್ಕೆ ಹಣವಿರುತ್ತೆ ಶಾಲಾ ಮಕ್ಕಳ ಸಮವಸ್ತ್ರಕ್ಕೆ ಸರ್ಕಾರದ ಬಳಿ ಹಣವಿಲ್ವ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ!

masthmagaa.com:

ಸರ್ಕಾರಿ ಶಾಲಾ ಮಕ್ಕಳಿಗೆ ಯೂನಿಫಾರ್ಮ್ ವಿತರಣೆ ವಿಚಾರದಲ್ಲಿ ರಾಜ್ಯ ಸರ್ಕಾರದ ಬೇಜವಾಬ್ದಾರಿಯ ಕುರಿತು ಹೈಕೋರ್ಟ್‌ ಕಿಡಿಕಾರಿದೆ. ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರೋ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ಮತ್ತು ಒಂದು ಜೊತೆ ಶೂ ಹಾಗೂ 2 ಜೊತೆ ಸಾಕ್ಸ್‌ ನೀಡಬೇಕೆಂದು 2018ರ ಆಗಸ್ಟ್‌ ತಿಂಗಳಲ್ಲಿ ಹೈಕೋರ್ಟ್‌ ಆದೇಶ ನೀಡಿತ್ತು. ಆದರೆ ಆದೇಶದ ಪಾಲನೆ ಆಗಿಲ್ಲ ಅಂತ ಆರೋಪಿಸಿ ಕೊಪ್ಪಳದ ಮಾಸ್ಟರ್‌ ಮಂಜುನಾಥ್ ಅನ್ನೋರು ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳ ಕಾರ್ಯ ವೈಖರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದೆ. ಇನ್ನು ಸರ್ಕಾರ ಸಲ್ಲಿಸಿರೋ ವರದಿ ಪ್ರಕಾರ ಒಂದು ಜೊತೆ ಸಮವಸ್ತ್ರ ಮಾತ್ರ ಕೊಟ್ಟಿರೋದು ಬೆಳಕಿಗೆ ಬಂದಿದೆ. ಶಾಲಾ ಮಕ್ಕಳಿಗೆ ಸಮವಸ್ತ್ರದ ಜೊತೆಗೆ ಶೂ ಮತ್ತು ಸಾಕ್ಸ್ ಸಿಕ್ಕಿದೆಯೇ ಅನ್ನೋದು ದೇವರಿಗೇ ಗೊತ್ತು. ಸಮರ್ಪಕ ರೀತಿಯಲ್ಲಿ ಸಮವಸ್ತ್ರ ವಿತರಣೆ ಯಾಕೆ ಮಾಡಿಲ್ಲ? ಇದರ ವಿತರಣೆಯ ಜವಾಬ್ದಾರಿ ಹೊತ್ತಿದ್ದ ಅಧಿಕಾರಿ ಯಾರು ತಿಳಿಸಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡ್ತೀವಿ ಅಂತ ಕೋರ್ಟ್‌ ಕಿಡಿಕಾರಿದೆ. ಅಷ್ಟೆ ಅಲ್ದೆ ನೀವು ಉತ್ಸವಗಳನ್ನು ನಡೆಸೋಕೆ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡ್ತೀರಿ. ಆದರೆ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡೋಕೆ ನಿಮ್ಮಲ್ಲಿ ಹಣವಿಲ್ಲ. ಸರ್ಕಾರಕ್ಕೆ ನಾಚಿಕೆ ಆಗುವುದಿಲ್ಲವೇ? ಅಂತ ಖಾರವಾಗಿ ಪ್ರಶ್ನಿಸಿದೆ.

-masthmagaa.com

Contact Us for Advertisement

Leave a Reply