ಅಣ್ವಸ್ತ್ರ ದೇಶವಾಗಿದ್ದುಕೊಂಡು ಭಿಕ್ಷೆ ಬೇಡೋಕೆ ನಮಗೆ ನಾಚಿಕೆ ಆಗುತ್ತೆ: ಪಾಕ್‌ PM

masthmagaa.com:

ಏಷ್ಯಾದ ರೋಗಿ ಅಂತ ಕರೆಸಿಕೊಳ್ತಿರೋ ಪಾಕಿಸ್ತಾನ, ಈಗ ತನ್ನ ಮುಖಕ್ಕೆ ತಾನೇ ಕನ್ನಡಿ ಹಿಡಿಯೋ ಕೆಲಸ ಮಾಡ್ತಿದೆ. ಬರೀ ಕನ್ನಡಿ ಹಿಡೀತಾ ಇಲ್ಲ.. ನಮ್ಮ ಬಗ್ಗೆ ನಮಗೆ ಅಸಹ್ಯ ಆಗ್ತಿದೆ ಅಂತ ಹೇಳಿಕೊಳ್ತಾಯಿದೆ. ʻನಾವು ನ್ಯೂಕ್ಲಿಯರ್‌ ದೇಶ ಅಂತ ಅನ್ನಿಸಿಕೊಂಡು ಬೇರೆಯವರ ಹತ್ರ ಭಿಕ್ಷೆ ಬೇಡ್ತಾ, ಅವರಿವರ ಹತ್ರ ಕೈ ಚಾಚ್ತಾ ಇರೋದನ್ನ ನೋಡ್ತಿದ್ರೆ ನಮಗೆ ನಾಚಿಕೆ ಆಗ್ತಿದೆ ಅಂತ, ಖುದ್ದು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಅಳಲು ತೋಡಿಕೊಂಡಿದ್ದಾರೆ. ಇಂಟರ್‌ವ್ಯೂ ಒಂದರಲ್ಲಿ ಈ ಬಗ್ಗೆ ಮಾತನಾಡಿದ ಪಾಕಿಸ್ತಾನದ ಪ್ರಧಾನ ಮಂತ್ರಿಗಳು, ನಾವು ಅಣ್ವಸ್ತ್ರ ದೇಶವಾಗಿದ್ದುಕೊಂಡು ಅಂತರಾಷ್ಟ್ರೀಯವಾಗಿ ಸಾಲ ಕೊಡಿ, ಪರಿಹಾರ ಕೊಡಿ ಅಂತ ಕೇಳ್ತಿದ್ರೆ ನಿಜವಾಗಿಯೂ ನಮಗೆ ಮುಜುಗರ, ಅವಮಾನ ಆಗ್ತಿದೆ. ಪಾಕಿಸ್ತಾನದ ಆರ್ಥಿಕ ಸವಾಲುಗಳನ್ನು ಎದುರಿಸೋಕೆ ವಿದೇಶಿ ಸಾಲ ನಮಗೆ ಒಳ್ಳೇದಲ್ಲ. ಏಕೆಂದರೆ ಸಾಲಗಳನ್ನು ಹಿಂತಿರುಗಿಸಬೇಕಾಗುತ್ತದೆ ಅಂತ ಹೇಳಿದ್ದಾರೆ. ಅಲ್ದೇ ಈ ಸಂಕಷ್ಟದ ಸಮಯದಲ್ಲಿ ನಮಗೆ ಸಹಾಯ ಮಾಡ್ತಿರೊ ಅರಬ್‌ ದೇಶಗಳನ್ನ ಅದ್ರಲ್ಲೂ ಮುಖ್ಯವಾಗಿ ಸೌದಿ ಅರೇಬಿಯಾಗೆ ನಾವು ತುಂಬಾ ಥ್ಯಾಂಕ್ಸ್‌ ಹೇಳ್ತೀವಿ ಅಂತ ಹೇಳಿದ್ದಾರೆ. ಈ ಮೂಲಕ ಪಾಕ್‌ನಲ್ಲಿ ಬಿಗಡಾಯಿಸ್ತಿರೋ ಪರಿಸ್ಥಿತಿಯನ್ನ ಮತ್ತೊಮ್ಮೆ ಜಗಜ್ಜಾಹೀರು ಮಾಡಿದಾರೆ. ನವಿಲು ಕುಣಿಯುತ್ತೆ ಅಂತೇಳಿ ಕೆಂಬೂತ ಕೂಡ ಪುಕ್ಕ ಸಿಕ್ಕಿಸಿಕೊಂಡು ನಿಂತ್ಕೊಳ್ತಂತೆ ಅನ್ನೋ ಮಾತು ಎಷ್ಟು ನಿಜನೋ ಏನೋ, ಆದ್ರೆ ಈ ಮಾತುಗಳು ಈಗ ಪಾಕಿಸ್ತಾನಕ್ಕೆ ಹೇಳಿ ಮಾಡಿಸಿದ ಹಾಗೇ ಇದೆ. ಭಾರತ ಅಣ್ವಸ್ತ್ರವಾಗ್ತಿದೆ ಅನ್ನೋ ಹೊಟ್ಟೆಕಿಚ್ಚಿಗೆ ಭಾರತಕ್ಕಿಂತ ಹೆಚ್ಚಿನ ನ್ಯೂಕ್ಲಿಯಾರ್‌ ವೆಪನ್‌ಗಳನ್ನ ತಯಾರು ಮಾಡಿಕೊಂಡ ಪಾಕಿಸ್ತಾನ, ಇರೋ ಹಣವನ್ನೆಲ್ಲಾ ಮಿಲಿಟರಿಗೆ ಖರ್ಚು ಮಾಡ್ತಾ, ಭಾರತದ ವಿರುದ್ದ ಉಗ್ರರಿಗೆ ಬುತ್ತಿ ಕಟ್ಟಿಕೊಡ್ತಾ ಬಂದಿತ್ತು. ಈಗ ಪರಿಸ್ಥಿತಿ ಹೇಗಾಗಿದೆ ಅಂದ್ರೆ ಉಗ್ರರ ಹೊಟ್ಟೆ ತುಂಬಿಸುತ್ತಾ ತನ್ನ ಜನರನ್ನ ಹಸಿವಿನಿಂದ ಮಲಗಿಸ್ತಾಯಿದೆ. ಪಾಕಿಸ್ತಾನ ಜನ ಬೇಕಿದ್ರೆ ಹುಲ್ಲು ತಿಂದು ಕೊಂಡು ಇರ್ತಾರೆ.. ಆದ್ರೆ ಭಾರತಕ್ಕೆ ಪ್ರತಿಯಾಗಿ ಅಣ್ವಸ್ತ್ರ ತಯಾರಿಸಿಕೊಳ್ಳದೇ ಇರಲ್ಲ ಅಂತ ಪಾಕ್‌ನಲ್ಲಿ ಜುಲ್ಫಿಕರ್ ಅಲಿ ಭುಟ್ಟೋ ಅನ್ನೋ ನಾಯಕ ಈ ಹಿಂದೆ ಹೇಳಿದ್ರು. ಅದರಂತೆ ಪಾಕ್‌ ಅಣ್ವಸ್ತ್ರ ದೇಶವೂ ಆಯ್ತು. ಈಗ ಅದೇ ರೀತಿ ಪಾಕ್‌ನಲ್ಲಿ ಜನ ಆಹಾರಕ್ಕಾಗಿ ಪರದಾಡೋ ಹೊತ್ತೂ ಆಗಿದೆ. ಇದಿಷ್ಟು ಸಾಲದು ಅಂತ ಈಗ ಖುದ್ದು ಪಾಕ್‌ ಪ್ರಧಾನಿಗಳೇ ನನಗೆ ಸಾಲ ಕೇಳೋಕೆ ನಾಚಿಕೆ ಆಗ್ತಿದೆ ಅಂತೇಳಿ ಜಗತ್ತಿನ ಮುಂದೆ ಪಾಕ್‌ ಮಾನವನ್ನ ಮತ್ತಷ್ಟು ಹರಾಜು ಹಾಕಿದ್ದಾರೆ.

-masthmagaa.com

Contact Us for Advertisement

Leave a Reply