ಮುಂದಿನ ವಾರ CAA ಕಾನೂನು: ಕೇಂದ್ರ ಸಚಿವರ ಮಹತ್ವದ ಹೇಳಿಕೆ!

masthmagaa.com:

ಮುಂದಿನ ವಾರವೇ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಥ್ವಾ CAA ಪಾಲಿಸಿ ಜಾರಿಯಾಗಲಿದೆ ಅಂತ ಕೇಂದ್ರ ಸಚಿವ ಶಾಂತನು ಠಾಕೂರ್‌ ಬಿಗ್ ಸ್ಟೇಟ್‌ಮೆಂಟ್ ನೀಡಿದ್ದಾರೆ. ಸೋಮವಾರ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಠಾಕೂರ್‌, “ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿದೆ. ಮುಂದಿನ ಏಳು ದಿನಗಳಲ್ಲಿ ದೇಶಾದ್ಯಂತ ಸಿಎಎ ಕಾನೂನು ಜಾರಿಗೆ ಬರಲಿದೆ. ಇದು ನನ್ನ ಗ್ಯಾರಂಟಿ. ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ, ಭಾರತದ ಪ್ರತಿಯೊಂದು ರಾಜ್ಯದಲ್ಲೂ ಸಿಎಎ ಒಂದು ವಾರದೊಳಗೆ ಜಾರಿಗೆ ಬರಲಿದೆ ಅಂತ ಹೇಳಿದ್ದಾರೆ. ಅತ್ತ ಠಾಕೂರ್‌ ಹೇಳಿಕೆಗೆ ವೆಸ್ಟ್‌ ಬೆಂಗಾಲ್ ಸಿಎಂ ಮಮತಾ ಬ್ಯಾನರ್ಜಿ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ʻಬಿಜೆಪಿ ಈಗ ಪೌರತ್ವ ಕಾಯಿದೆ ಬಗ್ಗೆ ಮಾತಾಡ್ತಿದೆ, ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡ್ತಿದೆ. ನಾವು ಬಂಗಾಳದಲ್ಲಿ ಪ್ರತಿ ಪೌರನಿಗೂ ಮತದಾನದ ಹಕ್ಕನ್ನ ನೀಡಿದ್ದೇವೆʼ ಅಂದಿದ್ದಾರೆ. ಅಲ್ಲದೇ ರಾಷ್ಟ್ರೀಯ ನಾಗರಿಕ ನೊಂದಣಿಯಲ್ಲಿ ತಮ್ಮ ಹೆಸರುಗಳನ್ನ ಖಾತ್ರಿ ಪಡಿಸಿಕೊಳ್ಳಿ ಅಂತ ಬಂಗಾಳದ ಜನತೆಗೆ ಮಮತಾ ಕರೆ ನೀಡಿದ್ದಾರೆ. ಇನ್ನು ಈ ಕಾಯ್ದೆ ಪ್ರಕಾರ 2014 ರವರೆಗೆ ಭಾರತಕ್ಕೆ ವಲಸೆ ಬಂದವರಿಗೆ ಅಧಿಕೃತವಾಗಿ ಭಾರತದ ಪೌರತ್ವವನ್ನ ನೀಡಲಾಗುತ್ತದೆ.

-masthmagaa.com

Contact Us for Advertisement

Leave a Reply