ಶಿಖರ್ ಧವನ್ ದಾಂಪತ್ಯದಲ್ಲಿ ಬಿರುಕು! ಪತ್ನಿಗೆ ಡಿವೋರ್ಸ್​​

masthmagaa.com:

ಟೀಂ ಇಂಡಿಯಾದ ಹೊಡಿಬಡಿ ಆಟಗಾರ ಶಿಖರ್ ಧವನ್ ಮತ್ತು ಆಯೇಶಾ ಮುಖರ್ಜಿ ಮದುವೆಯಾದ 8 ವರ್ಷಗಳ ಬಳಿಕ ಡಿವೋರ್ಸ್ ಪಡೆದಿದ್ದಾರೆ. ಇವರಿಬ್ಬರು 2012ರಲ್ಲಿ ಮದ್ವೆಯಾಗಿದ್ರು. ಇವರಿಗೆ ಝೊರಾವರ್ ಅನ್ನೋ ಹೆಸರಿನ ಮಗ ಕೂಡ ಇದ್ದಾನೆ. ಈ ಬಗ್ಗೆ ಆಯೇಶಾ ಮುಖರ್ಜಿ ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದು, ನಾನೀಗ 2 ಟೈಂ ಡಿವೋರ್ಸಿ ಅಂತ ಬರೆದುಕೊಂಡಿದ್ದಾರೆ. ಆಯೆಶಾ ಮುಖರ್ಜಿ ಆಸ್ಟ್ರೇಲಿಯಾದ ಮೆಲ್ಬೋರ್ನ್​ ಮೂಲದ ಮಾಜಿ ಬಾಕ್ಸರ್ ಪಟುವಾಗಿದ್ದು, ಶಿಖರ್​ಧವನ್​ಗೂ ಮುನ್ನ ಆಸ್ಟ್ರೇಲಿಯಾದ ಉದ್ಯಮಿಯೊಬ್ಬರನ್ನು ಮದ್ವೆಯಾಗಿದ್ರು. ಅವರಿಂದ ರಿಯಾ, ಆಲಿಯಾ ಅನ್ನೋ ಮಕ್ಕಳು ಕೂಡ ಇದ್ದಾರೆ. 11 ವರ್ಷ ದೊಡ್ಡವರಾದ ಇವರನ್ನು ಶಿಖರ್ ಧವನ್ ಪ್ರೀತಿಸಿ ಮದ್ವೆಯಾಗಿದ್ರು. ಸದ್ಯ ಶಿಖರ್ ಧವನ್ ಐಪಿಎಲ್​ನಲ್ಲಿ ಭಾಗಿಯಾಗಲು ಯುಎಇಗೆ ತೆರಳಿದ್ದು, ಡೆಲ್ಲಿ ಕ್ಯಾಪಿಟಲ್ ಪರವಾಗಿ ಆಡಲಿದ್ದಾರೆ.

-masthmagaa.com

Contact Us for Advertisement

Leave a Reply