ಜಪಾನ್‌ನ ಮಾಜಿ ಪ್ರಧಾನಿಯ ಅಂತಿಮ ಸಂಸ್ಕಾರದಲ್ಲಿ ಪ್ರಧಾನಿ ಮೋದಿ ಭಾಗಿ!

masthmagaa.com:

ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆಯವರ ಅಂತ್ಯಕ್ರಿಯೆಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ಜಪಾನ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ‌ ಅಗಲಿದ ಜಪಾನ್ ನಾಯಕನಿಗೆ ಅಂತಿಮ ಸಮನ ಸಲ್ಲಿಸಿದ್ದಾರೆ. ಇದಕ್ಕೂ ಮುಂಚೆ ಜಪಾನ್‌ನ ಹಾಲಿ ಪ್ರಧಾನಿ ಫಿಮಿಯೋ ಕಿಶಿದಾರನ್ನ ಮೋದಿ ಭೇಟಿಯಾಗಿಯಾಗಿದ್ರು. ಈ ವೇಳೆ ಶಿಂಜೋ ಅಬೆಯವರನ್ನ ಕುರಿತು ಮೋದಿ ಭಾವನಾತ್ಮಕ ಮಾತುಗಳನ್ನಾಡಿದ್ದಾರೆ. ಭಾರತೀಯರು ಯಾವಾಗಲೂ ಅಬೆಯವರನ್ನ ಮಿಸ್‌ ಮಾಡಿಕೊಳ್ಳುತ್ತಾರೆ. ವಯಕ್ತಿಕವಾಗಿ ನಾನು ಕೂಡ ಶಿಂಜೋ ಅಬೆಯನ್ನ ಮಿಸ್‌ ಮಾಡಿಕೊಳ್ತಿದ್ದೀನಿ ಅಂತ ಹೇಳಿದ್ದಾರೆ. ಅಲ್ದೇ ಭಾರತ ಮತ್ತು ಜಪಾನ್ ಎರಡೂ ದೇಶಗಳ ಸಂಬಂಧ ವೃದ್ದಿ ಮಾಡುವಲ್ಲಿ ಅವರ ಪಾತ್ರ ತುಂಬಾ‌ ದೊಡ್ಡದಿತ್ತು. ಜಾಗತಿಕ ದೃಷ್ಠಿಕೋನದಿಂದಲೂ ಇದು ತುಂಬಾ ಇಂಪಾರ್ಟೆಂಟ್‌ ಆಗಿತ್ತು. ಈಗ ನಿಮ್ಮ ಅಂದ್ರೆ ಕಿಶಿದಾ ಅವರ ನೇತೃತ್ವದ ಜಪಾನ್‌, ಭಾರತದ ಜೊತೆಗಿನ ಸಂಬಂಧವನ್ನ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸವಿದೆ ಅಂತ ಹೇಳಿದ್ರು. ಅಂದ್ಹಾಗೆ ಕಳೆದ ಜುಲೈ 8ರಂದು ಚುನಾವಣೆ ಪ್ರಚಾರದಲ್ಲಿದ್ದ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆಯವರನ್ನ ಹಂತಕನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದ. ಈಗ ಅವರ ಅಂತ್ಯ ಸಂಸ್ಕಾರ ನೆರವೇರ್ತಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಕೆನಾಡ ಪ್ರಧಾನಿ ಜಸ್ಟೀನ್‌ ಟ್ರೂಡು, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌, ದಕ್ಷಿಣ ಕೊರಿಯ ಪ್ರಧಾನಿ ಹಾನ್‌ ಡಕ್‌ ಸೂ, ಆಸ್ಟ್ರೇಲಿಯಾ ಪ್ರಧಾನಿ ಆಂಟನಿ ಅಲ್ಬನೀಸ್‌, ಬ್ರಿಟನ್‌, ಹಾಗೂ ಇನ್ನಿತರ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ರು.

-masthmagaa.com

Contact Us for Advertisement

Leave a Reply