ಭದ್ರಾವತಿ ಜನತೆಗೆ ಸಿಹಿಸುದ್ಧಿ ಕೊಟ್ಟ ಕೇಂದ್ರ ಸರ್ಕಾರ! ಏನದು?

masthmagaa.com:

ಶಿವಮೊಗ್ಗದ ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನರಾರಂಭಕ್ಕೆ ಒತ್ತಾಯಿಸಿ ನಡೆಸಿದ್ದ ಭದ್ರಾವತಿ ಜನರ ಹೋರಾಟಕ್ಕೆ ಫಲ ಸಿಕ್ಕಿದೆ. ಮೈಸೂರು ರಾಜಮನೆತನದಿಂದ ಆರಂಭಗೊಂಡ ಐತಿಹಾಸಿಕ ಉಕ್ಕಿನ ತಯಾರಿಕಾ ಕಾರ್ಖಾನೆ ಕೆಲವೇ ದಿನಗಳಲ್ಲಿ ಪುನರಾರಂಭವಾಗಲಿದೆ. ಭಾರತೀಯ ಉಕ್ಕು ಪ್ರಾಧಿಕಾರ ನಿಯಮಿತ (SAIL) ಆಡಳಿತ ಮಂಡಳಿ VISL ಕಾರ್ಖಾನೆಯಲ್ಲಿ ಉತ್ಪಾದನೆಗೆ ಅನುಮತಿ ನೀಡಿದ್ದು, ಆಗಸ್ಟ್‌ 10ಕ್ಕೆ ಕಾರ್ಖಾನೆ ಶುರುವಾಗಲಿದೆ. ಅಂದ್ಹಾಗೆ ಈ ವರ್ಷದ ಫೆಬ್ರವರಿಯಲ್ಲಿ ಹೆಚ್ಚಿನ ಉತ್ಪಾದನಾ ವೆಚ್ಚ, ಕಡಿಮೆ ಪ್ರಮಾಣದ ಉತ್ಪಾದನೆ ಮತ್ತು ಅದಿರು ಗಣಿ ಕೊರತೆಯಿಂದಾಗಿ VISL ಮುಚ್ಚಲಾಗಿದೆ ಅಂತ ಘೋಷಿಸಿದ್ದರು.

-masthmagaa.com

Contact Us for Advertisement

Leave a Reply