ಪಂಚ ರಾಜ್ಯ ಚುನಾವಣೆ ಗೆದ್ದ ಬಿಜೆಪಿಗೆ ಶಾಕ್​! ಬೈಎಲೆಕ್ಷನ್​ನಲ್ಲಿ ಸೋಲು

masthmagaa.com:

ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಬಿಜೆಪಿಗೆ ಬೈ ಎಲೆಕ್ಷನ್​ನಲ್ಲಿ ಹಿನ್ನಡೆಯಾಗಿದೆ. ಒಟ್ಟು ನಾಲ್ಕು ರಾಜ್ಯಗಳಲ್ಲಿ ಒಂದು ಲೋಕಸಭೆ ಮತ್ತು ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ​ ನಡೆದಿತ್ತು. ಇದರಲ್ಲಿ ಬಿಜೆಪಿ ಶೂನ್ಯ ಸುತ್ತಿದೆ. ಪಶ್ಚಿಮ ಬಂಗಾಳದ ಎರಡು ಕ್ಷೇತ್ರಗಳಿಗೆ ನಡೆದ ಬೈಎಲೆಕ್ಷನ್​ನಲ್ಲಿ ಟಿಎಂಸಿ ಗೆದ್ದಿದೆ. ಅಸನ್ಸೋಲ್ ಲೋಕಸಭಾ​ ಕ್ಷೇತ್ರದಲ್ಲಿ ಟಿಎಂಸಿಯ ಶತೃಘನ್​ ಸಿನ್ಹಾ ಗೆದ್ರೆ, ಬಾಲಿಗಂಜ್​ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿಯ ಬಬುಲ್ ಸುಪ್ರಿಯೊ ಗೆದ್ದಿದ್ದಾರೆ. ಇನ್ನು ಎನ್​ಡಿಎ ಅಧಿಕಾರದಲ್ಲಿರೋ ಬಿಹಾರದಲ್ಲಿ ಒಂದು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ವಿಪಕ್ಷ ಆರ್​ಜೆಡಿ ಗೆದ್ದಿದೆ. ಮಹಾರಾಷ್ಟ್ರ ಮತ್ತು ಚತ್ತೀಸ್​ಗಢದಲ್ಲಿ ಒಂದೊಂದು ಕ್ಷೇತ್ರಕ್ಕೆ ನಡೆದ ಬೈ ಎಲೆಕ್ಷನ್​ನಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ.

-masthmagaa.com

Contact Us for Advertisement

Leave a Reply