ಹೆಂಡ್ತಿ ಚೆನ್ನಾಗಿಲ್ಲ, ಡಿವೋರ್ಸ್ ಕೊಡಿ: ಪತಿರಾಯನ ವಿಚಿತ್ರ ಕೇಸ್

masthmagaa.com:

ಮೇಕಪ್‌ ಇಲ್ಲದೆ ನನ್ನ ಹೆಂಡತಿ ಚಂದ ಕಾಣಲ್ಲ, ಅವಳ ಮುಖ ನೋಡಲು ಆಗಲ್ಲ, ಹೀಗಾಗಿ ಅವಳಿಗೆ ನಾನು ವಿಚ್ಚೇದನೆ ಕೊಡ್ತೇನೆ ಅಂತ ಪತಿಯೊಬ್ಬ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಈ ವಿಚಿತ್ರ ಘಟನೆ ನಡೆದಿದ್ದು ಈಜಿಪ್ಟ್‌ನಲ್ಲಿ. ವ್ಯಕ್ತಿಯೊಬ್ಬನಿಗೆ ಫೇಸ್‌ಬುಕ್‌ನಲ್ಲಿ ಯುವತಿ ಒಬ್ಬಳ ಪರಿಚಯ ಆಗಿತ್ತು. ಆಕೆ ಫೇಸ್‌ಬುಕ್‌ನಲ್ಲಿ ಸಕತ್‌ ಫಿಲ್ಟರ್‌, ಎಫೆಕ್ಟ್ಸ್‌ ಎಲ್ಲ ಹಾಕಿ ಫೋಟೋವನ್ನ ಆಕರ್ಷಕವಾಗಿ ಮಾಡಿ ಅಪ್‌ ಲೋಡ್‌ ಮಾಡ್ತಾ ಇದ್ಲು. ಈ ಪೋಟೋವನ್ನ ನೋಡಿ ಇಷ್ಟ ಪಟ್ಟ ಆತ ಆ ಯುವತಿಯನ್ನ ಮದುವೆ ಆಗಲು ಬಯಸಿದ್ದ. ನಂತರ ಅನೇಕ ಬಾರಿ ಮೀಟ್‌ ಆದಾಗಲು ಮೇಕಪ್‌ನಲ್ಲೆ ಇದ್ದ ಕಾರಣ ಯುವತಿ ಬಹಳಷ್ಟು ಚಂದವಾಗಿ, ಆಕರ್ಷಕವಾಗಿ ಕಾಣಿಸಿದ್ದಳು. ನಂತ್ರ ಒಂದು ತಿಂಗಳ ಹಿಂದೆ ಮದ್ವೆ ಕೂಡ ಆದ್ರು. ಆದ್ರೆ ಮದ್ವೆ ಆದ ದಿನವೇ ಮೇಕಪ್‌ ಇಲ್ಲದ ಮುಖವನ್ನ ನೋಡಿ ಪತಿ ಶಾಕ್‌ ಆಗಿದ್ದಾನೆ. ಒಂದು ಸಲಕ್ಕೆ ಇವಳನ್ನೆ ನಾನು ಇಷ್ಟ ಪಟ್ಟು ಮದುವೆಯಾಗಿದ್ದಾ ಅಂತ ಆಶ್ಚರ್ಯಪಟ್ಟಿದ್ದಾನೆ. ನಂತ್ರ ಹೆಂಡತಿಯ ವಿದ್‌ಔಟ್‌ ಮೇಕಪ್‌ ಲುಕ್‌ಗೆ ಒಗ್ಗಿಕೊಳ್ಳಲು ಆಗ್ತ ಇಲ್ಲ. ಮದುವೆಗು ಮುನ್ನ ನನ್ನ ಹೆಂಡತಿ ತುಂಬಾ ಮೇಕಪ್‌ ಮಾಡಿಕೊಂಡು ನನಗೆ ಮೋಸ ಮಾಡಿದ್ದಾಳೆ. ಮೇಕಪ್‌ ಇಲ್ಲದೆ ಗಲೀಜು ಕಾಣ್ತ ಇದ್ದಾಳೆ. ಹಾಗಾಗಿ ಅವಳಿಂದ ವಿಚ್ಚೇದನೆ ಬೇಕೆ ಬೇಕು ಅಂತ ಪತಿ ಕೋರ್ಟ್​ ಮೆಟ್ಟಿಲೇರಿದ್ದಾನೆ.

-masthmagaa.com

 

Contact Us for Advertisement

Leave a Reply