ಪೊಲೀಸರ ಮೇಲೆ ಖಡ್ಗದಿಂದ ದಾಳಿ ಮಾಡಿದವ ಅರೆಸ್ಟ್​​..!

masthmagaa.com:

ದೆಹಲಿ: ಹರಿಯಾಣ-ದೆಹಲಿ ನಡುವಿನ ಸಿಂಘು ಗಡಿಯಲ್ಲಿ ಗಲಾಟೆ ಸಂಬಂಧ ಒಟ್ಟು 44 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅವರಲ್ಲಿ ಖಡ್ಗದಿಂದ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದ ವ್ಯಕ್ತಿ ಕೂಡ ಸೇರಿದ್ದಾನೆ. ಇವರೆಲ್ಲರ ಮೇಲೂ ಕರ್ತವ್ಯದಲ್ಲಿದ್ದ ಅಧಿಕಾರಿಗಳ ಕೊಲೆಯತ್ನದ ಕೇಸ್ ದಾಖಲಿಸಲಾಗಿದೆ.

ಮತ್ತೊಂದು ಪ್ರತಿಭಟನೆ ಸ್ಥಳವಾದ ಘಾಜಿಪುರ್​​ನ ದೆಹಲಿ-ಮೀರತ್ ಎಕ್ಸ್​ಪ್ರೆಸ್​ ವೇಯಲ್ಲಿ ಸಾವಿರಾರು ಜನ ಸೇರುತ್ತಿದ್ದು, ಅಲ್ಲಿ ಪ್ರತಿಭಟನಾಕಾರರನ್ನು ಖಾಲಿ ಮಾಡುವ ಸ್ಥಳೀಯ ಆಡಳಿತದ ಪ್ರಯತ್ನ ಯಶಸ್ವಿಯಾಗುತ್ತಿಲ್ಲ.. ಈ ನಡುವೆ ಇವತ್ತು ಗಾಂಧೀಜಿ ಪುಣ್ಯಸ್ಮರಣೆಯ ದಿನವಾಗಿದ್ದರಿಂದ ಇಂದು ಸದ್ಭಾವನಾ ದಿನವಾಗಿ ಆಚರಿಸುತ್ತಿದ್ದಾರೆ. ಅಂದ್ರೆ ಉಪವಾಸ ಇರೋ ಮೂಲಕ ಗಾಂಧೀಜಿಯವರಿಗೆ ಗೌರವ ಸಲ್ಲಿಸೋದಾಗಿ ರೈತರು ಹೇಳಿದ್ಧಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತರು ನಾವು ನಿನ್ನೆಯೂ ಶಾಂತಿಯುತವಾಗಿ ಪ್ರತಿಭಟಿಸಿದ್ದೇವೆ.. ಇಂದದೂ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದೇವೆ. ನಾಳೆಯೂ ಶಾಂತಿಯುತವಾಗಿಯೇ ಪ್ರತಿಭಟಿಸುತ್ತೇವೆ ಅಂತ ಹೇಳಿದ್ಧಾರೆ. ಕೇಂದ್ರ ಸರ್ಕಾರ ಸುಳ್ಳು ಸುದ್ದಿ ಮತ್ತು ಹಿಂಸಾಚಾರವನ್ನು ಹರಡಲು ಯತ್ನಿಸುತ್ತಿದೆ. ಹೀಗಾಗಿಯೇ ಸತ್ಯ ಮತ್ತು ಅಹಿಂಸೆಯ ಮಹತ್ವವನ್ನು ಸಾರಲು ಈ ಉಪವಾಸ ಹಮ್ಮಿಕೊಂಡಿದ್ದೇವೆ ಅಂತ ರೈತರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply