ಶಸ್ತ್ರಾಸ್ತ್ರ ಖರೀದಿಯಲ್ಲಿ ಭಾರತಕ್ಕೆ ಅಗ್ರ ಸ್ಥಾನ! ಯುರೋಪ್‌ ಸಂಸ್ಥೆ ವರದಿ!

masthmagaa.com:

ಶಸ್ತಾಸ್ತ್ರ ಖರೀದಿಯಲ್ಲಿ ಭಾರತ ಜಗತ್ತಲ್ಲೇ ನಂಬರ್‌ ಒನ್‌ ಸ್ಥಾನಪಡೆದಿದೆ. 2019-2023ರ ಅವಧಿಯಲ್ಲಿ ಭಾರತ ಅತಿಹೆಚ್ಚು ಶಸ್ತ್ರಾಸ್ತ ಆಮದು ಮಾಡಿಕೊಂಡಿದೆ ಅಂತ ಯುರೋಪ್‌ ಮೂಲದ ಸಿಪ್ರಿ ಅಂದ್ರೆ Stockholm International Peace Research Institute (SIPRI) ರಿಪೋರ್ಟ್‌ ಮಾಡಿದೆ . ಈ ಅವಧಿಯಲ್ಲಿ ಭಾರತದ ಇಂಪೋರ್ಟ್‌ ರೇಟ್‌ 4.7%ಗೆ ಏರಿಕೆಯಾಗಿದೆ. ಇನ್ನು ವಿಶ್ವದ ಒಟ್ಟಾರೆ ಶಸ್ತ್ರಾಸ್ತ್ರ ಖರೀದಿಯಲ್ಲಿ ಭಾರತ ಒಂದೇ ದೇಶ ಸುಮಾರು 9.8%ರಷ್ಟು ಖರೀದಿ ಮಾಡಿದೆ ಅಂತ ಸಿಪ್ರಿ ತಿಳಿಸಿದೆ. ಇನ್ನು ಭಾರತಕ್ಕೆ ಅತಿಹೆಚ್ಚು ಆಯುಧ ಮಾರಾಟ ಮಾಡಿರೋ ದೇಶಗಳ ಪಟ್ಟಿಯಲ್ಲಿ ರಷ್ಯಾಗೆ ಈ ಸಲವೂ ಮೊದಲನೇ ಸ್ಥಾನ ಇದೆ. 2019-23ರಲ್ಲಿ ಶೇ 36%ನಷ್ಟು ಆಯುಧ ಖರೀದಿ ಮಾಡಿಕೊಳ್ಳಲಾಗಿದೆ. ಆದರೆ ಈ ಮುಂಚೆಗೆ ಹೋಲಿಸಿಕೊಂಡ್ರೆ ಈ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಇನ್ನು ಎರಡನೇ ಸ್ಥಾನದಲ್ಲಿ ಫ್ರಾನ್ಸ್‌ ಇದೆ. ಅವರಿಂದ 33%ನಷ್ಟು ಶಸ್ತ್ರಾಸ್ತ್ರಗಳನ್ನ ಭಾರತ ಆಮದು ಮಾಡ್ಕೊಂಡಿದೆ..ಇನ್ನು ಅಮೆರಿಕದಿಂದ 13%ನಷ್ಟು ಆಯುಧ ಖರೀದಿ ಮಾಡಿದೆ. ಭಾರತ ರಕ್ಷಣಾ ಕ್ಷೇತ್ರಕ್ಕೆ ಅತಿಹೆಚ್ಚಿನ ಹಣ ಸುರೀತಾ ಇರೋದು ಇದಕ್ಕೆ ಕಾರನ ಅಂತೇಳಲಾಗ್ತಿದೆ. ಅಂದ್ಹಾಗೆ ಈ ಬಾರಿ ಮಂಡಿಸಲಾದ ಮಧ್ಯಂತರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಒಟ್ಟು 6.2 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಹೊಸ ಶಸ್ತ್ರಾಸ್ತ್ರಗಳ ಖರೀದಿಗಾಗಿ 1.72 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದೆ. ಇದು ಕಳೆದ ವರ್ಷದ ಬಜೆಟ್‌ಗಿಂತ 5.78% ಜಾಸ್ತಿಯಾಗಿದೆ. ಇನ್ನು 2019-23 ಅವಧಿಯಲ್ಲಿ ಭಾರತ ನಂತ್ರ ಅತೀ ಹೆಚ್ಚು ಶಸ್ತ್ರಾಸ್ತ್ರಗಳನ್ನ ಆಮದು ಮಾಡ್ಕೊಂಡಿರೋ ರಾಷ್ಟ್ರಗಳಂದ್ರೆ, ಸೌದಿ ಅರೇಬಿಯಾ ಮತ್ತು ಪುಟ್ಟ ಕತಾರ್‌. ಈ ಪಟ್ಟಿಯಲ್ಲಿ ಯುಕ್ರೇನ್‌ 4ನೇ ಸ್ಥಾನದಲ್ಲಿದ್ರೆ….ಪಾಕಿಸ್ತಾನ 5ನೇ ಸ್ಥಾನದಲ್ಲಿದೆ. ಯುಕ್ರೇನ್‌ ಯುದ್ಧ ಪರಿಣಾಮ 2014-18 ಮತ್ತು 2019-23 ಅವಧಿ ನಡುವೆ ಯುರೋಪ್‌ ರಾಷ್ಟ್ರಗಳ ಶಸ್ತ್ರಾಸ್ತ್ರ ಆಮದಿನಲ್ಲಿ 94%ನಷ್ಟು ಏರಿಕೆಯಾಗಿದೆ ಅಂತ ರಿಪೋರ್ಟ್‌ ತಿಳಸಿದೆ.

-masthmagaa.com

Contact Us for Advertisement

Leave a Reply