ಮನೆಯ ಸೀಲಿಂಗ್​​ನಲ್ಲಿ ಹೆಬ್ಬಾವು… ಅಯ್ಯೋ ದೇವಾ…

masthmagaa.com:

ಹಳ್ಳಿ ಕಡೆ ಮನೇಲಿ ಸಣ್ ಸಣ್ ಹಾವು ಬರೋದೆಲ್ಲಾ ದೊಡ್ಡ ವಿಚಾರವೇನಲ್ಲ. ಆದ್ರೆ ಸಿಟಿ ಮನೇಲಿ ಸೀಲಿಂಗ್​ ಒಳಗೆ ದೈತ್ಯ ಹೆಬ್ಬಾವು ಪತ್ತೆಯಾದ್ರೆ ಹೇಗಿರುತ್ತೆ. ಅಂಥದ್ದೇ ಘಟನೆಯೊಂದು ನಡೆದಿದೆ. ಇದು ಎಲ್ಲಿ ನಡೆದಿದ್ದು ಏನ್ ಕಥೆ ಅಂತ ಗೊತ್ತಿಲ್ಲ. ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ತುಂಬಾ ವೈರಲ್ ಆಗ್ತಿದೆ. ಇದ್ರಲ್ಲಿ ವ್ಯಕ್ತಿಯೊಬ್ಬ ಸೀಲಿಂಗ್ ಒಳಗೆ ಕೂತಿರೋ ಹೆಬ್ಬಾವನ್ನು ಎಳೆದು ಹೊರತೆಗೆದಿದ್ದಾರೆ. ಅದು ಕಚ್ಚೋಕೂ ಟ್ರೈ ಮಾಡುತ್ತೆ. ಅದ್ರಿಂದ ತಪ್ಪಿಸಿಕೊಳ್ಳೋ ಆ ವ್ಯಕ್ತಿ ಅದರ ಕುತ್ತಿಗೆ ಹಿಡಿದುಕೊಳ್ತಾರೆ. ಇದನ್ನು ನೋಡಿದ ನೆಟ್ಟಿಗರು ಇದು ಮಲೇಷ್ಯಾ ಅಥವಾ ಇಂಡೋನೇಷ್ಯಾದು ಇರಬಹುದು ಅಂತ ಅಂದಾಜಿಸಿದ್ದಾರೆ.

-masthmagaa.com

Contact Us for Advertisement

Leave a Reply