ಹಡಗು ಹೈಜಾಕ್‌! ಪೈರೇಟ್ಸ್‌ ಪ್ಲಾನ್‌ಗೆ ಭಂಗವಾಯ್ತು ಭಾರತೀಯ ನೌಕೆ!

masthmagaa.com:

ಅರಬ್ಬೀ ಸಮುದ್ರದ ಕಡಲಲ್ಲಿ ಭಾರತೀಯ ನೌಕಾಪಡೆ ಮತ್ತೊಂದು ರೋಚಕ ಕಾರ್ಯಾಚರಣೆ ನಡೆಸಿದೆ. ಸೋಮಾಲಿಯಾ ಕಡಲ್ಗಳ್ಳರು ಅಪಹರಿಸಿದ್ದ ಹಡಗೊಂದನ್ನ ರಕ್ಷಣೆ ಮಾಡಿ ಅದ್ರಲ್ಲಿದ್ದ 15 ಮಂದಿ ಭಾರತೀಯರನ್ನು ಸೇರಿದಂತೆ 21 ಜನರನ್ನ ರೆಸ್ಕ್ಯೂ ಮಾಡಿದೆ. ನೌಕಾಪಡೆಯ ಕಾರ್ಯಾಚರಣೆಯಿಂದ ಲೈಬೀರಿಯ ಹಡಗು ‘MV LILA NORFOLK’ ಹೈಜಾಕ್‌ ಮಾಡೋ ಪೈರೇಟ್ಸ್‌ಗಳ ಪ್ಲಾನ್‌ ವಿಫಲವಾಯ್ತು ಅಂತ ಭಾರತೀಯ ನೌಕಾಪಡೆ ಹೇಳಿದೆ. ಅಂದ್ಹಾಗೆ ಜನವರಿ 4ರಂದು ಸೋಮಾಲಿಯಾ ಕರಾವಳಿ ಬಳಿ 88,000 ಟನ್‌ಗಳಷ್ಟು ತೂಕದ MV ಲಿಲಾ ನೊರ್ಫ್ಲಾಕ್‌ ( ‘MV LILA NORFOLK’) ಅನ್ನೋ ಲೈಬೀರಿಯನ್‌ಗೆ ಸೇರಿದ ಸರಕು ಸಾಗಣೆ ಹಡಗು ಬ್ರೆಜಿಲ್‌ನಿಂದ ಬಹ್ರೇನ್‌ ಕಡೆಗೆ ಹೊರಟ್ಟಿತ್ತು. ಈ ವೇಳೆ 5-6 ಜನರಿದ್ದ ಆಗಂತುಕರ ಗುಂಪೊಂದು ಹಡಗನ್ನ ಹೈಜಾಕ್‌ ಮಾಡಿತ್ತು. ಆಗ ತಕ್ಷಣವೇ ಕಾರ್ಗೋ ಹಡಗು ತುರ್ತು ಸಿಗ್ನಲ್‌ ಕಳಿಸಿತ್ತು. ಹಡಗು ಅಪಹರಣ ಸುದ್ದಿ ತಿಳಿಯುತ್ತಲೇ ಭಾರತೀಯ ನೌಕಾಪಡೆ ಕಾರ್ಯಚರಣೆಗೆ ಇಳಿದಿತ್ತು. ಕಡಲ್ಗಳ್ಳರನ್ನು ಪತ್ತೆಹಚ್ಚಲು ಹತ್ತಿರದಲ್ಲೇ ಇದ್ದ INS ಚೆನ್ನೈ ಯುದ್ಧನೌಕೆಯನ್ನು ನಿಯೋಜಿಸಿತ್ತು. ಅಷ್ಟೇ ಅಲ್ಲದೇ ಕಡಲ ಗಸ್ತು ವಿಮಾನ, ಹೆಲಿಕಾಪ್ಟರ್‌ಗಳು ಹಾಗೂ P-81 ದೀರ್ಘಶ್ರೇಣಿಯ ವಿಮಾನಗಳು ಹಾಗೂ ಪ್ರಿಡೆಕ್ಟರ್‌ MQ9B ಡ್ರೋನ್‌ಗಳನ್ನು ನಿಯೋಜನೆ ಮಾಡಿತ್ತು. ಮೊದಲು ನೇವಿ ಏರ್‌ಕ್ರಾಫ್ಟ್‌ ಹಡಗಿನ ಮೇಲೆ ಹಾರಾಡಿ ಹಡಿಗಿನೊಂದಿಗೆ ಸಂಪರ್ಕ ಸಾಧಿಸಿದೆ. ಅಲ್ಲದೇ ಕಡಲ್ಗಳ್ಳರಿಗೆ ವಾರ್ನಿಂಗ್‌ ನೀಡಿದೆ. ಈ ವೇಳೆ ಭಯಬಿದ್ದ ಕಡಲ್ಗಳ್ಳರು ಹಡಗನ್ನ ಬಿಟ್ಟು ಬೋಟ್‌ಗಳಲ್ಲಿ ಓಡಿ ಹೋಗಿದ್ದಾರೆ. ನಂತ್ರ ಮಧ್ಯಾಹ್ನ 3 ಗಂಟೆ 15 ನಿಮಿಷಕ್ಕೆ ಸಂಕಷ್ಟಕ್ಕೆ ಸಿಲುಕಿದ್ದ ಹಡಗನ್ನ ತಲುಪಿದ INS ಚೆನ್ನೈ ಕ್ಷಿಪ್ರ ಕಾರ್ಯಾಚರಣೆ ಮಾಡಿದೆ. ನೌಕಾಪಡೆಯ ಟಾಪ್‌ ಯೋಧರಾದ ಮಾರ್ಕೋಸ್‌ ಕಮಾಂಡೋಸ್‌ ಕಾರ್ಗೋ ಹಡಗಿನ ಮೇಲೆ ಇಳಿದು ಸಿಬ್ಬಂದಿಯನ್ನ ರಕ್ಷಿಸಿದ್ದಾರೆ. ಅಂದ್ಹಾಗೆ ಡಿಸೆಂಬರ್‌ 14ರಂದು ಕೂಡ ಇದೇ ರೀತಿ ಮಾಲ್ಟಾಗೆ ಸೇರಿದ ಹಡಗನ್ನ ಕಡಲ್ಗಳ್ಳರು ಹೈಜಾಕ್‌ ಮಾಡಿದ್ರು. ಆಗ್ಲೂ ಕೂಡ ನೌಕಾಪಡೆ ಯಶಸ್ವಿ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು.

-masthmagaa.com

Contact Us for Advertisement

Leave a Reply