ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಸೋನಿಯಾ ಗಾಂಧಿ!

masthmagaa.com:

ರಾಜ್ಯಸಭೆಯ ನೂತನ ಸದಸ್ಯರಾಗಿ ಇದೀಗ ಮಾಜಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್‌ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸೋನಿಯಾ ಗಾಂಧಿಯವ್ರು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವ್ರಿಂದ ತೆರವಾದ ಸ್ಥಾನಕ್ಕೆ ರಾಜಸ್ಥಾನದಿಂದ ಆಯ್ಕೆ ಆಗಿದ್ದಾರೆ. ಅಶ್ವಿನಿ ವೈಷ್ಣವ್‌ ಅವ್ರು ಒಡಿಶಾದಿಂದ ಆಯ್ಕೆ ಆಗಿದ್ದಾರೆ. ಇನ್ನು ಇವ್ರೊಂದಿಗೆ ಒಟ್ಟು 12 ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಪೈಕಿ ಕರ್ನಾಟಕದ ಕಾಂಗ್ರೆಸ್‌ ನಾಯಕರಾದ ಅಜಯ್‌ ಮಖೇನ್, ಸೈಯದ್‌ ನಾಸೀರ್‌ ಹುಸೇನ್‌ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇನ್ನು ಅತ್ತ ಕೇರಳಾದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಶಶಿ ತರೂರ್‌ ಲೋಕಸಭಾ ಚುನಾವಣೆ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದಾರೆ. ತಿರುವನಂತಪುರಂ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಸ್ಪರ್ಧೆಗಿಳಿದಿದ್ದಾರೆ.

-masthmagaa.com

Contact Us for Advertisement

Leave a Reply