ಈ ದೇಶದ ಪ್ರಧಾನಿ, ಅಧ್ಯಕ್ಷರನ್ನು ಅರೆಸ್ಟ್ ಮಾಡಿದ ಸೇನೆ!

masthmagaa.com:

ಪಶ್ಚಿಮ ಆಫ್ರಿಕಾದ ದೇಶವಾದ ಮಾಲಿಯಲ್ಲಿ ಸೈನಿಕರು ದಂಗೆ ಎದ್ದಿದ್ದು, ದೇಶದ ಹಂಗಾಮಿ ಅಧ್ಯಕ್ಷ ಬಾಹ್ ಎನ್​ ದಾವ್ ಮತ್ತು ಪ್ರಧಾನಿ ಮೋಕ್ಟಾರ್ ಓವಾನೇಯನ್ನು ಅರೆಸ್ಟ್ ಮಾಡಿದ್ದಾರೆ. 9 ತಿಂಗಳ ಹಿಂದೆ ಬಂಡೆದಿದ್ದ ಸೇನೆ ಹಂಗಾಮಿ ಸರ್ಕಾರ ರಚಿಸಿ, ಅದ್ರಲ್ಲಿ ತನ್ನಿಬ್ಬರನ್ನು ನಿಯೋಜಿಸಿತ್ತು. ಆದ್ರೀಗ ಮಾಲಿ ಸರ್ಕಾರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ, ಕ್ಯಾಬಿನೆಟ್​​ನಿಂದ ಸೇನೆಗೆ ಸೇರಿದ ಇಬ್ಬರನ್ನು ಹೊರಹಾಕಲಾಗಿತ್ತು. ಅದ್ರ ಬೆನ್ನಲ್ಲೇ ಸೇನೆ ಬಂಡೆದ್ದು, ಅಧ್ಯಕ್ಷ ಮತ್ತು ಪ್ರಧಾನಿಯ ಜೊತೆಗೆ ರಕ್ಷಣಾ ಸಚಿವರನ್ನು ಕೂಡ ಅರೆಸ್ಟ್ ಮಾಡಿದೆ. ಆಫ್ರಿಕಾ ಯೂನಿಯನ್ ಮತ್ತು ವಿಶ್ವಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದೆ. ಅಂತಾಷ್ಟ್ರೀಯ ಸಮುದಾಯ ಈಗಾಗಲೇ ಮಾಲಿ ಸೇನೆ ಅಧ್ಯಕ್ಷ ಬಾಹ್ ಎನ್​ ದಾವ್ ಮತ್ತು ಪ್ರಧಾನಿ ಮೋಕ್ಟಾರ್ ಓವಾನೇಯನ್ನು ಬಿಡುಗಡೆಗೊಳಿಸಬೇಕು.. ಒಂದ್ವೇಳೆ ಮಿಲಿಟರಿ ಸರ್ಕಾರ ಅವರಿಬ್ಬರ ಬಳಿ ರಾಜೀನಾಮೆ ಕೊಡಿಸಿದ್ರೂ ಅದನ್ನು ಒಪ್ಪಿಕೊಳ್ಳೋದಿಲ್ಲ ಅಂತ ಕರೆ ಕೊಟ್ಟಿದೆ. ಸದ್ಯ ಅಧ್ಯಕ್ಷ ಪ್ರಧಾನಿ ಇಬ್ಬರನ್ನೂ ಸೇನೆಯ ಮುಖ್ಯ ಕಚೇರಿಯಲ್ಲಿ ಇರಿಸಲಾಗಿದೆ. ಈ ಹಿಂದೆ ದಂಗೆ ಎದ್ದಿದ್ದ ಸೇನೆ ಅಂತಾರಾಷ್ಟ್ರೀಯ ಒತ್ತಡದ ಬಳಿಕ ಕಳೆದ ಡಿಸೆಂಬರ್​ನಲ್ಲಿ ಸರ್ಕಾರ ರಚಿಸಿ, ಬಾಹ್ ಎನ್​ ದಾವ್​​ರನ್ನು ಅಧ್ಯಕ್ಷ ಮತ್ತು ಮೋಕ್ಟಾರ್ ಓವಾನೇಯನ್ನು ಪ್ರಧಾನಿಯನ್ನಾಗಿ ಮಾಡಿತ್ತು. ಮಾಲಿಯಲ್ಲಿ ಶಾಂತಿ ಸ್ಥಾಪನೆಗೆ ವಿಶ್ವಸಂಸ್ಥೆ ಪ್ರತಿ ವರ್ಷ 1.2 ಬಿಲಿಯನ್ ಡಾಲರ್ ಅಂದ್ರೆ ಸುಮಾರು 8ರಿಂದ 9 ಸಾವಿರ ರೂಪಾಯಿ ಖರ್ಚು ಮಾಡ್ತಿದೆ. ಅಲ್ಲಿನ ಸ್ಥಿತಿ ನೋಡಿದ್ರೆ ಹೀಗೆ..

-masthmagaa.com

Contact Us for Advertisement

Leave a Reply