ಭಾರತ ಮೂಲದ ನೆಲ್ಸನ್ ಮಂಡೇಲಾ ಫ್ರೆಂಡ್ ನಿಧನ!

masthmagaa.com:
ನೆಲ್ಸನ್ ಮಂಡೇಲಾ ಜೊತೆಗೆ ಗುರುತಿಸಿಕೊಂಡಿದ್ದ ಭಾರತೀಯ ಮೂಲದ ವರ್ಣಭೇದಿ ನೀತಿ ವಿರೋಧಿ ನಾಯಕ ಇಬ್ರಾಹಿಂ ಇಸ್ಮೈಲ್ ಇಬ್ರಾಹಿಂ ಸಾವನ್ನಪ್ಪಿದ್ದಾರೆ. ಇವರ ಸಾವಿನ ಬಗ್ಗೆ ದಕ್ಷಿಣ ಆಫ್ರಿಕಾದ ಆಡಳಿತಾರೂಢ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಘೋಷಿಸಿದೆ. ಇವರು ನೆಲ್ಸನ್ ಮಂಡೇಲಾ ಮತ್ತು ಅಹ್ಮದ್ ಖತ್ರಾಡಾ ಜೊತೆಗೆ ಹೋರಾಟದಲ್ಲಿ ಭಾಗಿಯಾಗಿ ರೊಬ್ಬನ್ ಐಲ್ಯಾಂಡ್​​ನಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇವರಿಗೆ 84 ವರ್ಷ ವಯಸ್ಸಾಗಿತ್ತು.
-masthmagaa.com

Contact Us for Advertisement

Leave a Reply