ಉತ್ತರ ಕೊರಿಯಾ ಅಣುಪರೀಕ್ಷೆ ಮಾಡಿದ್ರೆ ಈ ಸಲ ಕೇವಲ ನಾವು ಮಾತ್ರ ಉತ್ತರ ಕೊಡೋಲ್ಲ: ಅಮೆರಿಕ

masthmagaa.com:

ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆ ಮಾಡಿದ್ರೆ ಈ ಬಾರಿ ಕೇವಲ ನಾವು ಒಬ್ಬರೇ ಉತ್ತರ ಕೊಡಲ್ಲ, ಇಡೀ ವಿಶ್ವವೇ ನಿಮ್ಮ ಮೇಲೆ ಮುಗಿ ಬೀಳುತ್ತೆ ಅಂತ ಅಮೆರಿಕ ಕಿಡಿಕಾರಿದೆ. ದಕ್ಷಿಣ ಕೊರಿಯಾ ಪ್ರವಾಸದಲ್ಲಿರೋ ಅಮೆರಿಕದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ಡೆಪ್ಯೂಟಿ ಸೆಕ್ರಟ್ರಿ ವಂಡೆ ಆರ್‌ ಶೆರ್ಮನ್‌
ಅಲ್ಲಿನ ನಾಯಕರುಗಳ ಜೊತೆಗೆ ಚರ್ಚೆ ಮಾಡಿದ್ದು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವ್ರು ʻಉತ್ತರ ಕೊರಿಯಾ ಅಣು ಪರೀಕ್ಷೆ ಮಾಡಿದ್ರೆ. ಈ ಸಲ ನಾವು ಅಥವಾ ದಕ್ಷಿಣ ಕೊರಿಯಾ, ಜಪಾನ್‌ಗಳು ಮಾತ್ರ ಉತ್ತರ ಕೊಡಲ್ಲ. ಬದಲಾಗಿ ಇಡೀ ಜಗತ್ತಿನಿಂದ ತ್ವರಿತ ಮತ್ತು ಬಲವಾದ ಪ್ರತಿಕ್ರಿಯೆಯನ್ನ ಎದುರಿಸಬೇಕಾಗುತ್ತೆ ಅಂತ ಎಚ್ಚರಿಸಿದ್ದಾರೆ. ಅಲ್ಲದೇ ಈ ವಿಚಾರವಾಗಿ ನಾವು ಜಪಾನ್‌ ಹಾಗೂ ದಕ್ಷಿಣ ಕೊರಿಯಾ ಜೊತೆಗೆ ಮಾತುಕತೆ ನಡೆಸುತ್ತೇವೆ ಅಂತ ಹೇಳಿದ್ದಾರೆ. ಅಂದ್ಹಾಗೆ ಕಳೆದ ಕೆಲ ದಿನಗಳಿಂದ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜಪಾನ್‌ ಸಮುದ್ರದಲ್ಲಿ ಜಂಟಿ ಸಮರಾಭ್ಯಾಸ ನಡೆಸ್ತಿದ್ದು ಇದಕ್ಕೆ ಟಕ್ಕರ್‌ ಕೊಡೋಕೆ ಕಿಮ್‌ ಭಾನುವಾರವಷ್ಟೇ ಸುಮಾರು 8 ಮಿಸೈಲ್‌ಗಳನ್ನ ಹಾರಿಸಿದ್ರು. ಹೀಗಾಗಿ ಆ ಭಾಗದಲ್ಲಿ ಸದ್ಯ ಹಿಂದೆಂಗಿಂತಲೂ ಹೆಚ್ಚಿನ ಬಿಗುವಿನ ವಾತವರಣ ಇದೆ. ಕಿಮ್‌ ಮತ್ತಷ್ಟು ಮಿಸೈಲ್‌ ಟೆಸ್ಟ್‌ ಮಾಡ್ಬೋದು ಅಂತ ಹೇಳಲಾಗ್ತಿದೆ. ಸೋ ಈ ಹೊತ್ತಲ್ಲೇ ಅಮೆರಿಕ ಈ ರೀತಿ ಹೇಳಿದೆ.

-masthmagaa.com

Contact Us for Advertisement

Leave a Reply