ಬಾಹ್ಯಾಕಾಶದಲ್ಲಿ ಕಸದ ರಾಶಿ..! ಸ್ಪೇಸ್​ ಸ್ಟೇಷನ್​​ಗೆ ಡಿಕ್ಕಿ

masthmagaa.com:

ಮನುಷ್ಯರಾದ ನಾವು ಭೂಮಿ ಮೇಲಿನ ಪರಿಸರ ಮಾತ್ರ ಹಾಳ್ ಮಾಡ್ತಿಲ್ಲ. ಬಾಹ್ಯಾಕಾಶದ ಪರಿಸರವನ್ನು ಕೂಡ ಹಾಳು ಮಾಡ್ತಿದ್ದೀವಿ. ಭೂಮಿಯಿಂದ ಹಾರೋ ರಾಕೆಟ್​​​ಗಳು, ಉಪಗ್ರಹಗಳ ಅವಶೇಷಗಳು ಬಾಹ್ಯಾಕಾಶದಲ್ಲಿ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ. ಇದೀಗ ಅದರ ಒಂದು ತುಂಡು ಬಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಡಿಕ್ಕಿ ಹೊಡೆದಿದೆ. ಇದ್ರಿಂದ ಕೆನಡಾದ ಬಾಹ್ಯಾಕಾಶ ಸಂಸ್ಥೆ 2001ರಲ್ಲಿ ನೀಡಿದ್ದ ಕೆನಡಾ ಆರ್ಮ್​​ 2 ಅನ್ನೋ ರೋಬೋಟಿಕ್ ಆರ್ಮ್​​​ಗೆ ಹಾನಿಯಾಗಿದೆ. 14 ಇಂಚ್​​ ಡಯಾಮೀಟರ್ ಹೊಂದಿರೋ ಈ ರೋಬೋಟಿಕ್ ಆರ್ಮ್​ 57.7 ಅಡಿ ಉದ್ದವಿದೆ. ಮೇ 12ರಂದು ಇದ್ರಲ್ಲಿ ಸಣ್ಣ ಹೋಲ್ ಆಗಿರೋ ವಿಚಾರ ಗಮನಕ್ಕೆ ಬಂದಿದ್ದು, ಆದ್ರೂ ಕೂಡ ಕೆಲಸ ಮಾಡೋದನ್ನ ಮುಂದುವರಿಸಿದೆ. ಆದ್ರೂ ಕೂಡ ಇದು ಎಚ್ಚರಿಕೆಯ ಕರೆಗಂಟೆಯಾಗಿದೆ. ಯಾಕಂದ್ರೆ ನಮಲ್ಲಿರೋ ಬಹುತೇಕ ತಂತ್ರಜ್ಞಾನ ನಿಂತಿರೋದೇ ಉಪಗ್ರಹಗಳಿಂದ.. ಬಾಹ್ಯಾಕಾಶದಲ್ಲಿ ಅವಶೇಷಗಳು ಜಾಸ್ತಿಯಾದ ಹಾಗೂ ಉಪಗ್ರಹಗಳಿಗೆ ಅಪಾಯ ಜಾಸ್ತಿ ಇರುತ್ತೆ. ಸೋ ಈಗಾಗಲೇ ಇಂತಹ 27 ಸಾವಿರ ಅವಶೇಷಗಳ ಮೇಲೆ ನಿಗಾ ಇಡಲಾಗಿದೆ. ಆದ್ರೂ ಕೂಡ ಕೆಲವೊಂದು ಅವಶೇಷಗಳು ತುಂಬಾ ಸಣ್ಣದಾಗಿದ್ದು, ನಿಗಾ ಇಡಲು ಕೂಡ ಸಾಧ್ಯವಾಗ್ತಿಲ್ಲ.. ಈ ಸಣ್ಣ ಸಣ್ಣ ಕಣಗಳಿಂದ ದೊಡ್ಡ ಮಟ್ಟದ ಹಾನಿಯಾಗದೇ ಇದ್ರೂ, ಸಣ್ಣದೊಂದು ಹೋಲ್ ಕೂಡ ಒಮ್ಮೊಮ್ಮೆ ದೊಡ್ಡ ಅನಾಹುತಕ್ಕೆ ಕಾರಣವಾಗೋ ಸಾಧ್ಯತೆ ಇರುತ್ತೆ. ಈ ಬಗ್ಗೆ ನಾವು ಸಪರೇಟ್ ಆಗಿ ವಿಡಿಯೋ ಮಾಡಿದ್ದೀವಿ.. ಡಿಸ್ಕ್ರಿಪ್ಶನ್ ಬಾಕ್ಸ್​ನಲ್ಲಿ ಅದ್ರ ಲಿಂಕ್ ಕೂಡ ಹಾಕಿರ್ತೀವಿ.. ಸುತ್ತು ಜಗತ್ತು ನೋಡಿದ್ಮೇಲೆ ಆ ವಿಡಿಯೋ ಓಪನ್ ಮಾಡಿ ನೋಡಿ..

-masthmagaa.com

Contact Us for Advertisement

Leave a Reply