ಇಂಟರ್‌ನ್ಯಾಶನಲ್‌ ಸ್ಪೇಸ್‌ ಸ್ಟೇಷನ್‌ಗೆ ಟೊಮ್ಯಾಟೋ ಬೀಜಗಳನ್ನ ಹೊತ್ತೊಯ್ದ ಫಾಲ್ಕಾನ್‌ 9!

masthmagaa.com:

ಜಗತ್ತಿನ ನಂಬರ್‌ ಒನ್‌ ಶ್ರೀಮಂತ ಎಲಾನ್‌ ಮಸ್ಕ್‌ ಒಡೆತನದ ಸ್ಪೇಸ್‌ಎಕ್ಸ್‌ ಬಾಹ್ಯಾಕಾಶಕ್ಕೆ ಟಮೋಟ ಬೀಜಗಳನ್ನ ಕಳುಹಿಸಿದೆ. ಸ್ಪೇಸ್‌ಎಕ್ಸ್‌ ತನ್ನ ಡ್ರ್ಯಾಗನ್‌ ಬಾಹ್ಯಾಕಾಶ ನೌಕೆಯಲ್ಲಿ ಈ ಟಮೋಟ ಬೀಜಗಳನ್ನ ಇಂಟರ್‌ನ್ಯಾಶನಲ್‌ ಸ್ಪೇಸ್‌ ಸ್ಟೇಷನ್‌ ಅಥವಾ (ISS ) ಕಳುಹಿಸಿದೆ. ನಾಸಾದ ಕೆನಡಿ ಸ್ಪೇಸ್‌ ಸೆಂಟರ್‌ನಿಂದ ಈ ಫಾಲ್ಕಾನ್‌ 9 ರಾಕೆಟ್‌ನ್ನ ಲಾಂಚ್‌ ಮಾಡಲಾಗಿದೆ. ಇನ್ನು ಡ್ರ್ಯಾಗನ್‌ ನೌಕೆಯಲ್ಲಿ ರಿಸರ್ಚ್‌ ಹಾರ್ಡ್‌ವೇರ್ಸ್‌ ಮತ್ತು ಇತರ ಸಪ್ಪ್ಲೈಸ್‌ ಜೊತೆಗೆ ಟಮೋಟ ಸೀಡ್ಸ್‌ಗಳನ್ನ ಕಳುಹಿಸಲಾಗಿದೆ. ಈಗಾಗಲೇ ISS ನಲ್ಲಿ ವಿಭಿನ್ನ ತರಕಾರಿಗಳನ್ನ ಯಶಸ್ವಿಯಾಗಿ ಬೆಳಸಲಾಗಿದ್ದು, ಈಗ ಚಿಕ್ಕ ಟಮೋಟಗಳನ್ನ ಬೆಳೆಸೋದ್ರ ಕಡೆ ಗಮನ ಹರಿಸಲಾಗುತ್ತೆ. ಟಮೋಟ ಬಾಹ್ಯಾಕಾಶದಲ್ಲಿ ಹೇಗೆ ಬೆಳೆಯುತ್ತೆ. ಹಾಗೂ ಅದ್ರ ರುಚಿ ಮತ್ತು ನ್ಯೂಟ್ರಿಷಿಯನ್‌ ಹೊಂದಿರೋ ಬಗ್ಗೆ ಟೆಸ್ಟ್‌ ಮಾಡಲಾಗುತ್ತೆ ಅಂತ ನಾಸಾದ ಲೈಫ್‌ ಸೈನ್ಸ್‌ ವಿಜ್ಞಾನಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply