ದೇಶದಲ್ಲಿ ವೇಗ ಪಡೆದ ಕೊರೋನಾ.. ಕಳೆದ ಒಂದು ವಾರದ ಚಿತ್ರಣ..!

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,604 ಮಂದಿಗೆ ಹೊಸದಾಗಿ ಸೋಂಕು ತಗುಲಿದ್ದು, 87 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 70 ಸಾವಿರ ಗಡಿ ದಾಟಿ ಹೋಗಿದೆ. ಸದ್ಯ ದೇಶದಲ್ಲಿ 70,756 ಪ್ರಕರಣಗಳು ದೃಢಪಟ್ಟಿವೆ.

ಇದುವರೆಗೆ 2,293 ಮಂದಿ ಕೊರೋನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. 22,454 ಮಂದಿ ಗುಣಮುಖರಾಗಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ 46,008 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 23 ಸಾವಿರ ದಾಟಿದೆ. ನಂತರದ ಸ್ಥಾನದಲ್ಲಿ ಗುಜರಾತ್, ತಮಿಳುನಾಡು, ದೆಹಲಿ ಇದೆ.

ದೇಶದಲ್ಲಿ ಕಳೆದ ಒಂದು ವಾರದಲ್ಲಿ ‭24,342 ಮಂದಿಗೆ ಹೊಸದಾಗಿ ಕಾಯಿಲೆ ಹರಡಿದ್ದು, 717 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಕಾಯಿಲೆ ವೇಗವಾಗಿ ಹರಡುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಅಮೆರಿಕ, ರಷ್ಯಾ, ಬ್ರೆಜಿಲ್, ಬ್ರಿಟನ್ ದೇಶಗಳಿವೆ.

ಭಾರತದಲ್ಲಿ ಒಂದು ವಾರದ ಚಿತ್ರಣ:

ಮೇ  6: 2,959 (126 ಸಾವು)

ಮೇ 7: 3,561 (81 ಸಾವು)

ಮೇ 8: 3,390 (103 ಸಾವು)

ಮೇ 9: 3,320 (95 ಸಾವು)

ಮೇ 10: 3,277 (128 ಸಾವು)

ಮೇ 11: 4,231 (97 ಸಾವು)

ಮೇ 12: 3,604 (87 ಸಾವು)

-masthmagaa.com

Contact Us for Advertisement

Leave a Reply