masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 37,724 ಜನರಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12 ಲಕ್ಷ ಸಮೀಪಿಸಿದ್ದು 11,92,915 ಆಗಿದೆ. ಕಳೆದ 24 ಗಂಟೆಗಳಲ್ಲಿ 648 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 28,732 ಆಗಿದೆ.

ಕಳೆದ 24 ಗಂಟೆಗಳಲ್ಲಿ ದಾಖಲೆಯ 28,472 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಒಟ್ಟು 7,53,050 ಸೋಂಕಿತರು ಗುಣಮುಖರಾದಂತಾಗಿದ್ದು 4,11,133 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲಿ ನಿನ್ನೆ 3.43 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 1.47 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ಹೇಳಿದೆ.

ಕೊರೋನಾ ಪೀಡಿತ ಟಾಪ್​-10 ರಾಜ್ಯಗಳು:

1. ಮಹಾರಾಷ್ಟ್ರ: 3.27 ಲಕ್ಷ ಪ್ರಕರಣ (12,276 ಸಾವು)

2. ತಮಿಳುನಾಡು: 1.80 ಲಕ್ಷ ಪ್ರಕರಣ (2,626 ಸಾವು)

3. ದೆಹಲಿ: 1.25 ಲಕ್ಷ ಪ್ರಕರಣ (3,690 ಸಾವು)

4. ಕರ್ನಾಟಕ: 71,069 ಪ್ರಕರಣ (1,464 ಸಾವು)

5. ಆಂಧ್ರಪ್ರದೇಶ: 58,668 ಪ್ರಕರಣ (758 ಸಾವು)

6. ಉತ್ತರಪ್ರದೇಶ: 53,288 ಪ್ರಕರಣ (1,229 ಸಾವು)

7. ಗುಜರಾತ್: 50,379 ಪ್ರಕರಣ (2,196 ಸಾವು)

8. ತೆಲಂಗಾಣ: 47,705 ಪ್ರಕರಣ (429 ಸಾವು)

9. ಪಶ್ಚಿಮ ಬಂಗಾಳ: 47,030 ಪ್ರಕರಣ (1,182 ಸಾವು)

10. ರಾಜಸ್ಥಾನ: 31,373 ಪ್ರಕರಣ (577 ಸಾವು)

-masthmagaa.com

Contact Us for Advertisement

Leave a Reply