ಫೈಝರ್​ ಲಸಿಕೆಗೆ ಅನುಮೋದನೆ ಕೊಟ್ಟ ದಕ್ಷಿಣ ಏಷ್ಯಾದ ಮೊದಲ ದೇಶವಿದು

masthmagaa.com:

ಜಗತ್ತಿನ ಅತಿದೊಡ್ಡ ಲಸಿಕೆ ಉತ್ಪಾದಕ ಕಂಪನಿಯಾದ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾದಿಂದ ಶ್ರೀಲಂಕಾಗೆ ಕೊರೋನಾ ಲಸಿಕೆ ಪೂರೈಕೆಯಾಗೋದು ನಿಂತುಬಿಟ್ಟಿದೆ. ಇದಕ್ಕೆ ಕಾರಣ ಭಾರತದಲ್ಲಿ ಲಿಸಿಕೆಗೆ ಬೇಡಿಕೆ ಹೆಚ್ಚಾಗಿರೋದು. ಇಂಥಾ ಟೈಮಲ್ಲೇ ಶ್ರೀಲಂಕಾ ಸರ್ಕಾರ ಅಮೆರಿಕದ ಫೈಝರ್ ಕಂಪನಿ ಅಭಿವೃದ್ಧಿಪಡಿಸಿರೋ ಕೊರೋನಾ ವ್ಯಾಕ್ಸಿನ್​ಗೆ ಅನುಮೋದನೆ ಕೊಟ್ಟಿದೆ. ಈ ಮೂಲಕ ಫೈಝರ್​ ಲಸಿಕೆಗೆ ಅನುಮೋದನೆ ಕೊಟ್ಟ ದಕ್ಷಿಣ ಏಷ್ಯಾದ ಮೊದಲ ದೇಶ ಎನಿಸಿಕೊಂಡಿದೆ ಶ್ರೀಲಂಕಾ. ಅಲ್ಲಿ ರಷ್ಯಾದ ಸ್ಪಟ್ನಿಕ್ ಮತ್ತು ಚೀನಾದ ಸಿನೋಫಾರ್ಮ್ ಲಸಿಕೆಗೆ ಈಗಾಗಲೇ ಅನುಮೋದನೆ ಕೊಡಲಾಗಿದೆ.

-masthmagaa.com

Contact Us for Advertisement

Leave a Reply