ಈಸ್ಟರ್ ಸಂಡೇ ದಾಳಿ ಸಂಬಂಧ ಶ್ರೀಲಂಕಾ ಸಂಸದ ಅರೆಸ್ಟ್!

masthmagaa.com:

2019ರ ಈಸ್ಟರ್ ಸಂಡೇ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾ ಪೊಲೀಸರು ಟಾಪ್ ಮುಸ್ಲಿಂ ಲೀಡರ್ ಮತ್ತು ಸಂಸದರೊಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಆಲ್​ ಸೈಲಿನ್ ಮಕ್ಕಳ್ ಪಾರ್ಟಿಯ ರಿಶದ್ ಬತಿಉದ್ದೀನ್​ ಬಂಧಿತ ನಾಯಕ.. ಈತ ಮತ್ತು ಈತನ ಸಹೋದರ ರಿಯಾಜ್​​ ಮನೆ ಮೇಲೆ ದಾಳಿ ನಡೆಸಿ, ಇಬ್ಬರನ್ನೂ ಭಯೋತ್ಪಾದನೆ ತಡೆ ಕಾಯ್ದೆಯಡಿ ಬಂಧಿಸಿರೋದಾಗಿ ಪೊಲೀಸರು ತಿಳಿಸಿದ್ದಾರೆ. ಅಂದಹಾಗೆ ಈ ದಾಳಿಯಲ್ಲಿ 279 ಮಂದಿ ಸಾವನ್ನಪ್ಪಿದ್ರು. ದಾಳಿಯಾಗಿ 2 ವರ್ಷವೇ ಕಳೆದು ಹೋಗಿದ್ದು, ಮೊನ್ನೆಯಷ್ಟೇ ಶ್ರೀಲಂಕಾದ ರೋಮನ್ ಕ್ಯಾಥೋಲಿಕ್ ಚರ್ಚ್​​, ಪ್ರಕರಣದ ತನಿಖೆ ಮಂದಗತಿಯಲ್ಲಿ ಸಾಗುತ್ತಿದೆ ಅಂತ ಆರೋಪಿಸಿದ್ರು. ಅದ್ರ ಬೆನ್ನಲ್ಲೇ ಇಬ್ಬರನ್ನು ರೆಸ್ಟ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply