ಪರಿಸ್ಥಿತಿ ಸುಧಾರಿಸೋಕೆ ಶ್ರೀಲಂಕಾದ ಎಲ್ಲಾ ಸಚಿವರು ರಾಜೀನಾಮೆ

masthmagaa.com:

ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ನಲುಗ್ತಾ ಇರೋ ‍ಶ್ರೀಲಂಕಾದಲ್ಲಿ ಕ್ಷಿಪ್ರಗತಿಯಲ್ಲಿ ರಾಜಕೀಯ ಬೆಳವಣಿಗೆಗಳು ನಡೀತಾ ಇವೆ. ಹೊಸ ಬೆಳವಣಿಗೆಯಲ್ಲಿ ಪ್ರಧಾನಿ ಮಹಿಂದಾ ರಾಜಪಕ್ಸ ಕ್ಯಾಬಿನೆಟ್​​ನ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ. ಆರ್ಥಿಕ ಬಿಕ್ಕಟ್ಟನ್ನ ನಿಭಾಯಿಸಲು ವಿಫಲವಾದ ಮಹಿಂದಾ ರಾಜಪಕ್ಸ ಸರ್ಕಾರ ಕೆಳಗಿಳಿಬೇಕು ಅಂತ ಶ್ರೀಲಂಕಾದಲ್ಲಿ ಕಳೆದ ಕೆಲ ದಿನಗಳಿಂದ ಪ್ರತಿಭಟನೆಗಳು ನಡೀತಿದ್ವು. ಆದ್ರೀಗ ಪ್ರಧಾನಿ ಒಬ್ರನ್ನ ಹೊರತುಪಡಿಸಿ ಉಳಿದೆಲ್ಲಾ ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಒಟ್ಟು 26 ಜನ ಮಂತ್ರಿಗಳು ರಾಜೀನಾಮೆ ಸಲ್ಲಿಸಿದ್ದು ಇದ್ರಲ್ಲಿ ರಾಜಪಕ್ಸ ಕುಟುಂಬದ ಮೂವರು ಸಚಿವರು ಇದ್ದಾರೆ. ಇದ್ರೊಂದಿಗೆ ಲಂಕಾ ಸರ್ಕಾರ ಪ್ರತಿಭಟನೆಯ ಕಾವನ್ನ ಕಡಿಮೆ ಮಾಡೋಕೆ ನೋಡ್ತಿದೆ. ಇದರ ಬೆನ್ನಲ್ಲೇ, ಸದ್ಯದ ಪರಿಸ್ಥಿತಿಯಿಂದ ಹೊರಬರಲು ಎಲ್ಲಾ ಪಕ್ಷದವರು ಕೂಡ ಮಹಿಂದಾ ರಾಜಪಕ್ಸ ಕ್ಯಾಬಿನೆಟ್​ಗೆ​ ಸೇರಬೇಕು ಅಂತ ಅಹ್ವಾನ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಹೊಸ ಕ್ಯಾಬಿನೆಟ್​ ರಚನೆಯಾಗಿದೆ. ಈ ಹಿಂದೆ ಕಾನೂನು ಸಚಿವರಾಗಿದ್ದ ಅಲಿ ಸ್ಯಾಬ್ರಿ ಅನ್ನೋರನ್ನ ಆರ್ಥಿಕ ಸಚಿವರನ್ನಾಗಿ ಮಾಡಲಾಗಿದೆ. ಈ ಹಿಂದೆ ಅಧ್ಯಕ್ಷ ಗೋಟಬಯಾ ರಾಜಪಕ್ಸ ತಮ್ಮ ಕಿರಿ ಸಹೋದರ ಬಸಿಲ್​ ರಾಜಪಕ್ಸನನ್ನ ಫೈನಾನ್ಸ್ ಮಿನಿಸ್ಟರ್ ಮಾಡಿದ್ರು. ಆದ್ರೆ ಎಲ್ಲರೂ ಇವತ್ತು ರಾಜೀನಾಮೆ ನೀಡಿ, ಹೊಸ ಟೀಂ ರಚನೆಯಾಗಿದೆ. ಹೊಸ ಟೀಮ್​ನಲ್ಲಿ ಅಲಿ ಸ್ಯಾಬ್ರಿಗೆ ಫೈನಾನ್ಸ್​ ಮಿನಿಸ್ಟರ್ ಸ್ಥಾನ ಸಿಕ್ಕಿದೆ. ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟನ್ನ ಇವರು ಹೇಗೆ ಬಗೆಹರಿಸ್ತಾರೆ ಅನ್ನೋದನ್ನ ಕಾದು ನೋಡ್ಬೇಕು. ಅತ್ತ ಶ್ರೀಲಂಕಾ ಸೆಂಟ್ರಲ್‌ ಬ್ಯಾಂಕ್‌ನ ಗವರ್ನರ್‌ ಅಜಿತ್‌ ನಿವಾರ್ಡ್‌ ಕ್ಯಾಬ್ರಾಲ್‌ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರೋ ಅವ್ರು, ಕ್ಯಾಬಿನೆಟ್‌ ರಾಜಿನಾಮೇ ನೀಡಿರೋದ್ರಿಂದ ತಾವು ಈ ನಿರ್ಧಾರ ತಗೊಂಡಿರೋದಾಗಿ ಹೇಳಿದ್ದಾರೆ. ಇನ್ನು ಜನರ ಪ್ರತಿರೋಧ ಹೆಚ್ಚುತ್ತಿದ್ದಂತೆ ರಾಜಪಕ್ಸ ಆಡಳಿತ ಸೋಷಿಯಲ್‌ ಮೀಡೀಯಾ ಮೇಲೆ ಹೇರಿದ್ದ ನಿರ್ಬಂಧವನ್ನ ನಿನ್ನೆ ತಡರಾತ್ರಿ ತೆಗೆದು ಹಾಕಿದೆ. 36 ಗಂಟೆಗಳ ಕಾಲ ಹೇರಿದ್ದ ಕರ್ಫ್ಯೂ ಕೂಡ ಇವತ್ತು ಬೆಳಗ್ಗೆ 6 ಗಂಟೆಗೆ ತೆರವುಗೊಂಡಿದೆ. ಆದ್ರೆ ತುರ್ತು ಪರಿಸ್ಥಿತಿ ಮಾತ್ರ ಹಾಗೇ ಮುಂದುವರೆದಿದೆ.

-masthmagaa.com

Contact Us for Advertisement

Leave a Reply