ಭಾರತಕ್ಕೆ ಲಂಕಾ ಕೃತಜ್ಞತೆ! ಹೊಸ ಯೋಜನೆಗಳಿಗೆ ಒಪ್ಪಂದ!

masthmagaa.com:

ತನ್ನ ಆರ್ಥಿಕ ಬಿಕ್ಕಟ್ಟಿಗೆ ನೆರವಾದ ಭಾರತದೊಂದಿಗೆ ಸಂಬಂಧವನ್ನ ಇನ್ನಷ್ಟು ಸ್ಟ್ರಾಂಗ್‌ ಮಾಡೋಕೆ… ಇನ್ನಷ್ಟು ಕ್ಲೋಸ್‌ ಆಗೋಕೆ ಇದೀಗ ಶ್ರೀಲಂಕಾ ಮುಂದಾಗಿದೆ. ಉಭಯ ದೇಶಗಳು ಸೇರ್ಕೊಂಡು ಹೊಸ ಹೊಸ ಪ್ಲಾನ್‌ಗಳಿಗೆ ಒಪ್ಪಂದ ಮಾಡ್ಕೊಂಡಿರೋ ವಿಚಾರ ಇದೀಗ ಹೊರಬಿದ್ದಿದೆ. ಭಾರತದ IIT ಮದ್ರಾಸ್‌ ಕ್ಯಾಂಪಸ್‌ ಶ್ರೀಲಂಕಾದ ಕ್ಯಾಂಡಿಯಲ್ಲಿ ಸ್ಥಾಪನೆ ಆಗೋ ಪ್ಲಾನ್‌ ಇದೆ. ಹೀಗಂತ ಖುದ್ದು ಶ್ರೀಲಂಕಾದ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಇಂಟರ್‌ವ್ಯೂ ಒಂದ್ರಲ್ಲಿ ಹೇಳ್ಕೊಂಡಿದ್ದಾರೆ. ಇಷ್ಟಕ್ಕೆ ಭಾರತ ಮತ್ತು ಶ್ರೀಲಂಕಾ ನಡುವಿನ ಹೊಸ ಯೋಜನೆಗಳ ಒಪ್ಪಂದ ಮುಗಿದಿಲ್ಲ. ಇದ್ರೊಂದಿಗೆ ಮುಂದಿನ ವರ್ಷದ ಅಂತ್ಯದೊಳಗೆ LNG (Liquified natural gas) ಅಥ್ವಾ ದ್ರವೀಕೃತ ನೈಸರ್ಗಿಕ ಅನಿಲವನ್ನ ಭಾರತ ಶ್ರೀಲಂಕಾಗೆ ಸಪ್ಲೈ ಮಾಡಲಿದೆ. ನಂತ್ರ ಅಂತಿಮವಾಗಿ ಶ್ರೀಲಂಕಾದ ಕೊಲಂಬೋ ಬಂದರಿನಲ್ಲಿ ಆಫ್‌ಶೋರ್‌ ರಿಗ್ಯಾಸಿಫಿಕೇಶನ್‌ ಟರ್ಮಿನಲ್‌ನ್ನ ಕೂಡ ಸ್ಥಾಪಿಸಲಿದೆ. ಇನ್ನು ಶ್ರೀಲಂಕಾ ಇದೇ ಮಾರ್ಚ್‌ ನಂತ್ರ ಭಾರತಕ್ಕೆ ವೀಸಾ ಎಕ್ಸೆಂಪ್ಶನ್‌ ವಿಸ್ತರಿಸೋ ಸಾಧ್ಯತೆ ಕೂಡ ಇದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply