ಲಂಕಾದಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡೇಟು: ಓರ್ವ ಬಲಿ, 24 ಜನ ಗಾಯಾಳು

masthmagaa.com:

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗ್ತಾ ಇದ್ದು ಸುಧಾರಿಸೋ ಯಾವುದೇ ಲಕ್ಷಣಗಳು ಕಾಣ್ತಾ ಇಲ್ಲ. ನೈರುತ್ಯ ಲಂಕಾದ ರಂಬುಕ್ಕನ ಅನ್ನೋ ನಗರದಲ್ಲಿ ಪ್ರತಿಭಟನಕಾರರ ಮೇಲೆ ಪೋಲಿಸರು ಫೈರಿಂಗ್‌ ಮಾಡಿದ್ದು ಇದ್ರಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿ, ಸುಮಾರು 24 ಜನ ಗಾಯಗೊಂಡಿರೋ ಘಟನೆ ನಡೆದಿದೆ. ಜೊತೆಗೆ ಮೂವರ ಸ್ಥಿತಿ ಗಂಭೀರವಾಗಿದೆ ಅಂತ ಹೇಳಲಾಗಿದೆ. ಇದ್ದಕ್ಕಿದ್ದಂತೆ ಪೆಟ್ರೋಲ್‌ ಅಭಾವ ಸೃಷ್ಠಿಯಾಗಿ ಪೆಟ್ರೋಲ್‌ ಬೆಲೆ 84 ರುಪಾಯಿ ಏರಿಕೆ ಆಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ತಕ್ಷಣವೇ ಜನ್ರು ರಂಬುಕ್ಕನಾದ ಹೈವೇ ತಡೆದು ಪ್ರತಿಭಟನೆ ನಡೆಸಲು ಶುರು ಮಾಡಿದ್ದಾರೆ. ಆದ್ರೆ ಪೋಲಿಸರು ಮಾತ್ರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗ್ತಾ ಇತ್ತು ಹಾಗಾಗಿ ಅನಿವಾರ್ಯವಾಗಿ ಫೈರಿಂಗ್‌ ಮಾಡ್ಬೇಕಾಗಿ ಬಂತು ಅಂತ ಹೇಳಿದ್ದಾರೆ. ಈ ಬಗ್ಗೆ ಮಾತಾಡಿರೋ ಪೋಲಿಸ್‌ ಮುಖ್ಯಸ್ಥ ಚಂದನ ವಿಕ್ರಮರತ್ನೆ, ಪ್ರತಿಭಟನಾಕಾರರು ತುಂಬಾ ವೈಲೆಂಟ್‌ ಆದ್ರು, ರೈಲ್ವೇ ಟ್ರ್ಯಾಕ್‌ನ್ನೇ ಬ್ಲಾಕ್ ಮಾಡಿದ್ರು. ಅವ್ರು ಪೆಟ್ರೋಲ್‌ ಅಭಾವ ಆಗಿದ್ಕೆ ಮತ್ತು ಪೆಟ್ರೋಲ್‌ನ ಹಳೇ ದರದಲ್ಲೇ ಮಾರಾಟ ಮಾಡ್ಬೇಕು ಅಂತ ಆಗ್ರಹಿಸಿ ಪ್ರತಿಭಟನೆ ನಡೆಸ್ತಾಇದ್ರು. ಆಗ ನಾವು ಎರಡು ಟ್ಯಾಂಕರ್‌ಗಳನ್ನ ತರಿಸಿ ಪೆಟ್ರೋಲ್‌ ಪೂರೈಸೋಕೆ ನೋಡಿದ್ವಿ. ಆದ್ರೆ ಪ್ರತಿಭಟನಾಕಾರರು ಒಂದು ಟ್ಯಾಂಕರ್‌ನ ಬ್ಯಾಟರಿ ತೆಗೆದ್ರು ಅಂತ ಹೇಳಿದ್ದಾರೆ. ಇನ್ನು ಪಬ್ಲಿಕ್‌ ಸೆಕ್ಯುರಿಟಿ ಇಲಾಖೆಯ ಉನ್ನತ ಅಧಿಕಾರಿ ಜಗತ್‌ ಅಲ್ವಿಸ್‌ ಮಾತಾಡಿ ಕೆಲವೊಂದು ಜನ 33 ಸಾವಿರ ಲೀಟರ್‌ ಪೆಟ್ರೋಲ್‌ ಇರೋ ಟ್ಯಾಂಕರ್‌ಗೆನೇ ಬೆಂಕಿ ಹಾಕೋಕೆ ನೋಡಿದ್ರು ಹಾಗಾಗಿ ಪೋಲಿಸ್ರು ಫೈರ್‌ ಮಾಡೀದ್ದಾರೆ ಅಂತ ಹೇಳಿದ್ದಾರೆ. ಇನ್ನು ಘಟನೆ ಬಗ್ಗೆ ತನಿಖೆ ಮಾಡೋಕೆ ಮೂವರು ಸದಸ್ಯರ ಸಮಿತಿ ಒಂದನ್ನ ರಚಿಸಿದ್ದು, ಇದ್ರಲ್ಲಿ ಪೋಲಿಸರು ಅವಶ್ಯಕತೆಗಿಂತ ಹೆಚ್ಚಿನ ಬಲಪ್ರಯೋಗ ಮಾಡಿದ್ದಾರಾ ಅಂತ ಗೊತ್ತಾಗುತ್ತೆ ಅಂತ ಹೇಳಿದ್ದಾರೆ. ಇನ್ನು ಅಮೇರಿಕ, ಯುರೋಪಿಯನ್‌ ಒಕ್ಕೂಟ, ವಿಶ್ವಸಂಸ್ಥೆಯ ರಾಯಭಾರಿಗಳು ಘಟನೆಯನ್ನ ಖಂಡಿಸಿ ಹೇಳಿಕೆಯನ್ನ ಪ್ರಕಟಿಸಿವೆ. ಇನ್ನು ಇದ್ರ ನಡುವೆಯೇ ಔಷಧಿ ಕೊರತೆ ಆಗಿದೆ ಅಂತಾ ವೈದ್ಯರ ಸಂಘ ಕೂಡ ಪ್ರತಿಭಟನೆ ನಡೆಸ್ತಾ ಇದೆ. ಆ ಕಡೆ ಯೂನಿವರ್ಸಿಟಿ ಅಧ್ಯಾಪಕರ ಸಂಘ, ಟ್ರೇಡ್‌ ಯೂನಿಯನ್‌ಗಳು ಕೂಡ ಸರ್ಕಾರದ ವಿರುದ್ದದ ಪ್ರತಿಭಟನೆಗಳಿಗೆ ಕರೆನೀಡಿವೆ.

-masthmagaa.com

Contact Us for Advertisement

Leave a Reply