ಭಾರತದ ವಿರುದ್ಧ ಹೀನಾಯ ಸೋಲು: ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ ವಜಾ

masthmagaa.com:

ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನ ವಜಾಗೊಳಿಸಿ ಶ್ರೀಲಂಕಾ ಕ್ರೀಡಾ ಸಚಿವ ರೋಷನ್‌ ರಣಸಿಂಘೆ ಆದೇಶಿಸಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಅವಮಾನಕಾರಿಯಾಗಿ ಸೋತಿರೋ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ʻಶ್ರೀಲಂಕಾ ಕ್ರಿಕೆಟ್‌ ಅಧಿಕಾರಿಗಳಿಗೆ ಆಫೀಸ್‌ನಲ್ಲಿ ಉಳಿದುಕೊಳ್ಳೋಕೆ ಯಾವುದೇ ನೈತಿಕ ಹಕ್ಕುಗಳಿಲ್ಲ. ಇವ್ರೆಲ್ಲಾ ತಾವಾಗೇ, ಸ್ವಯಂ ಪ್ರೇರಿತರಾಗಿ ರಾಜಿನಾಮೆಯನ್ನ ಕೊಡಬೇಕುʼ ಅಂತ ರೋಷನ್‌ ರಣಸಿಂಘೆ ಕಿಡಿಕಾರಿದ್ದಾರೆ. ಅಂದ್ಹಾಗೆ ನವೆಂಬರ್‌ 2 ರಂದು ಮುಂಬೈನಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ 358 ರನ್‌ಗಳ ಗುರಿ ಪಡೆದಿದ್ದ ಶ್ರೀಲಂಕಾ ತಂಡವು ಕೇವಲ 55 ರನ್‌ಗಳಿಗೆ ಸರ್ವಪತನ ಕಂಡು, 302 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು.

-masthmagaa.com

Contact Us for Advertisement

Leave a Reply