ಟಾಲಿವುಡ್‌ ಆಳೋದಕ್ಕೆ ರೆಡಿಯಾದ ಶ್ರೀಲೀಲಾ : ಸಾಲು ಸಾಲು ಸಿನಿಮಾಗಳು ಅನೌನ್ಸ್‌ !

masthmagaa.com:

ಕನ್ನಡದ ಹುಡುಗಿ ಶ್ರೀಲೀಲಾ ಟಾಲಿವುಡ್‌ನಲ್ಲಿ ಮಿಂಚ್ತಾ ಇದಾರೆ. ಸದ್ಯ ಟಾಲಿವುಡ್‌ ಮೂವಿಗಳಲ್ಲಿ ಬ್ಯುಸಿ ಇರುವ ಶ್ರೀಲೀಲಾ ಅಲ್ಲು ಅರ್ಜುನ್‌ ಅವರ ಜೊತೆಯೂ ಸ್ಕ್ರೀನ್‌ ಶೇರ್‌ ಮಾಡಲಿದ್ದಾರೆ. ಸ್ಟಾರ್ ಡೈರೆಕ್ಟರ್ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನದಲ್ಲಿ ಆಹಾ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಅಲ್ಲು ಅರ್ಜುನ್‌ ಮತ್ತು ಶ್ರೀಲೀಲಾ ಜೊತೆಯಾಗಿ ನಟಿಸೋಕೆ ರೆಡಿಯಾಗಿದ್ದಾರೆ. ಈಗಾಗಲೇ ಚಿತ್ರ ಪೋಸ್ಟರ್‌ಗಳು ಕೂಡ ರಿಲೀಸ್‌ ಆಗಿದೆ. ಅಲ್ಲು ಅರ್ಜುನ್‌ ಮತ್ತು ಶ್ರೀಲೀಲಾ ಅವರ ಕಾಂಬಿನೇಷನ್‌ನಲ್ಲಿ ಇದು ಮೊದಲ ಸಿನಿಮಾ.

ಅಷ್ಟೇ ಅಲ್ಲ ಪವನ್ ಕಲ್ಯಾಣ್ ನಾಯಕನಾಗಿ ಹರೀಶ್ ಶಂಕರ್ ನಿರ್ದೇಶನದ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ತ್ರಿವಿಕ್ರಮ್ ನಿರ್ದೇಶನದ ‘ಗುಂಟೂರ್ ಕರಂ’ ಚಿತ್ರದಲ್ಲಿ ಮಹೇಶ್ ಬಾಬು ನಾಯಕನಾಗಿ ನಟಿಸುತ್ತಿದ್ದು, ಶ್ರೀಲೀಲಾ ಎರಡನೇ ನಾಯಕಿಯಾಗಿ ನಟಿಸ್ತಾ ಇದಾರೆ. ಈ ಚಿತ್ರದಲ್ಲಿ ಲಂಗಾ ದಾವಣಿಯಲ್ಲಿ ಶ್ರೀಲೀಲಾ ಪೋಸ್‌ ಕೊಟ್ಟಂತ ಫೋಟೋ ಸಖತ್‌ ವೈರಲ್‌ ಆಗಿದೆ.

ಅನಿಲ್ ರವಿಪುಡಿ ನಿರ್ದೇಶನದ ‘ಭಗವಂತ ಕೇಸರಿ’ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ನಾಯಕರಾಗಿದ್ದು, ಕಾಜಲ್ ಅಗರ್ವಾಲ್ ನಾಯಕಿಯಾಗಿದ್ದಾರೆ. ಈ ಸಿನಿಮಾದಲ್ಲಿ ಶ್ರೀಲೀಲಾ ಬಾಲಯ್ಯನ ಮಗಳ ಪಾತ್ರ ಮಾಡ್ತಾ ಇದಾರೆ. ಇದೇ ವಿಜಯ ದಶಮಿಯಂದು ಬಾಲಯ್ಯ ಅಭಿನಯದ ಈ ಚಿತ್ರ ರಿಲೀಸ್‌ ಆಗಲಿದೆ.

ಟಾಲಿವುಡ್‌ ನಟ ನಿತಿನ್ ಅವರ 32ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದಲ್ಲಿನ ಶ್ರೀಲೀಲಾ ಲುಕ್‌ ಪೋಸ್ಟರ್‌ ರಿಲೀಸ್‌ ಆಗಿತ್ತು. ಪವನ್ ಕಲ್ಯಾಣ್ ಮತ್ತು ಸಾಯಿ ಧರಮ್ ತೇಜ್ ಅಭಿನಯದ ‘ಬ್ರೋ’ ಸಿನಿಮಾದಲ್ಲಿ ಶ್ರೀಲೀಲಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸ್ತಾ ಇದಾರೆ. ಈ ಚಿತ್ರದ ಮೇಲೆ ಶ್ರೀಲೀಲಾ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply