SBI ಬ್ಯಾಂಕಿಗೆ ಈಗ ಧೋನಿಯವರೇ ರಾಯಭಾರಿ!

masthmagaa.com:

‌ʻಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾʼ (SBI), ಭಾರತೀಯ ಕ್ರಿಕೆಟ್ ಲೆಜೆಂಡ್ ಎಂ ಎಸ್ ಧೋನಿ ಅವ್ರನ್ನ ತನ್ನ ಅಧಿಕೃತ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದೆ. ಈ ಬಗ್ಗೆ ಇಂದು ಅನೌನ್ಸ್‌ ಮಾಡಿರೊ SBI, ಧೋನಿ ವಿವಿಧ ಮಾರ್ಕೆಟಿಂಗ್ ಮತ್ತು ಪ್ರಚಾರ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಅಂದಿದೆ. ಈ ಬಗ್ಗೆ ಮಾತನಾಡಿರೊ SBI ಮುಖ್ಯಸ್ಥ ದಿನೇಶ್ ಖಾರಾ, “ಟಫ್ ಸಿಚುಯೇಶನ್‌ಗಳನ್ನ ನಿಯಂತ್ರಣ ಮಾಡೊ, ಸ್ಪಷ್ಟ ಆಲೋಚನೆ ಮತ್ತು ನಿರ್ಧಾರ ತಗೊಳ್ಳೊ ಅವರ ಸಾಮರ್ಥ್ಯದಿಂದ, SBIಗೆ ಗ್ರಾಹಕರು, ಪಾಲುದಾರರೊಂದಿಗೆ ಸಂಪರ್ಕ ಸಾಧಿಸೋಕೆ ಹೆಲ್ಪ್‌ ಆಗಲಿದೆ. ಇದು ವಿಶ್ವಾಸಾರ್ಹತೆ ಮತ್ತು ನಾಯಕತ್ವದ ಮೌಲ್ಯಗಳನ್ನ ಬಿಂಬಿಸೊ, ತನ್ನ ಗ್ರಾಹಕರೊಂದಿಗೆ ಆಳವಾದ ಸಂಪರ್ಕ ಬೆಸೆಯೊ ಬ್ಯಾಂಕ್‌ನ ಬದ್ಧತೆಯ ಸಂಕೇತವಾಗಿದೆ” ಅಂತೇಳಿದ್ದಾರೆ.

masthmagaa.com

Contact Us for Advertisement

Leave a Reply