BIG BREAKING: ಭಾರತದ 3 ಕೃಷಿ ಕಾನೂನುಗಳಿಗೆ ಅಮೆರಿಕ ಬೆಂಬಲ

masthmagaa.com:

ಕೇಂದ್ರ ಸರ್ಕಾರದ 3 ಕೃಷಿ ಕಾನೂನುಗಳಿಗೆ ವಿಶ್ವದ ದೊಡ್ಢಣ್ಣ ಅಮೆರಿಕ ಬೆಂಬಲ ಸೂಚಿಸಿದೆ. ಹೊಸ ಕಾನೂನುಗಳಿಂದ ಭಾರತದ ಮಾರುಕಟ್ಟೆಗಳ ದಕ್ಷತೆ ಸುಧಾರಿಸುತ್ತೆ, ಹೆಚ್ಚೆಚ್ಚು ಖಾಸಗಿ ಬಂಡವಾಳವನ್ನ ಅಟ್ರಾಕ್ಟ್ ಮಾಡುತ್ತೆ ಅಂತ ಹೇಳಿದೆ. ಅಟ್​ ದಿ ಸೇಮ್​ ಟೈಂ, ಶಾಂತಿಯುತ ಪ್ರತಿಭಟನೆಯು ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಜಾಪ್ರಭುತ್ವದ ಲಕ್ಷಣವಾಗಿದೆ. ಭಾರತದ ಸುಪ್ರೀಂಕೋರ್ಟ್​ ಕೂಡ ಅದನ್ನೇ ಹೇಳಿದೆ. ಹೀಗಾಗಿ ಸರ್ಕಾರ ಮತ್ತು ರೈತರ ನಡುವೆ ಏನಾದ್ರೂ ಭಿನ್ನಾಭಿಪ್ರಾಯ ಇದ್ರೆ ಅದನ್ನ ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಬೇಕು ಅಂತ ಅಮೆರಿಕ ಹೇಳಿದೆ. ಈ ಮೂಲಕ 3 ಕೃಷಿ ಕಾನೂನುಗಳನ್ನ ಜಾರಿಗೆ ತಂದಿರುವ ಸರ್ಕಾರದ ನಡೆ ಮತ್ತು ರೈತರ ಶಾಂತಿಯುತ ಪ್ರತಿಭಟನೆ.. ಎರಡನ್ನೂ ಅಮೆರಿಕದ ಬೈಡೆನ್​ ಸರ್ಕಾರ ಬೆಂಬಲಿಸಿದೆ.

ಭಾರತದ ವಿದೇಶಾಂಗ ಇಲಾಖೆ ನಿನ್ನೆಯಷ್ಟೇ ಒಂದು ಹೇಳಿಕೆ ಬಿಡುಗಡೆ ಮಾಡಿತ್ತು. ಅದರಲ್ಲಿ, ಕೃಷಿ ಕ್ಷೇತ್ರದ ಸುಧಾರಣೆಗಾಗಿ ಈ ಕಾನೂನುಗಳನ್ನ ಭಾರತದ ಸಂಸತ್ ಪಾಸ್ ಮಾಡಿದೆ ಅನ್ನೋದನ್ನ ಹೈಲೆಟ್ ಮಾಡಿತ್ತು. ಜೊತೆಗೆ ರೈತ ಸಮುದಾಯದ ಒಂದು ಸಣ್ಣ ವರ್ಗ ಮಾತ್ರ ಈ ಕಾನೂನುಗಳ ಬಗ್ಗೆ ಆಕ್ಷೆಪ ಎತ್ತಿದೆ. ಹೀಗಾಗಿ ಮಾತುಕತೆ ನಡೆಸುವವರೆಗೆ ಆ ಕಾನೂನುಗಳನ್ನ ತಡೆ ಹಿಡಿಯಲಾಗಿದೆ ಅಂತ ವಿದೇಶಾಂಗ ಇಲಾಖೆ ಹೇಳಿತ್ತು.

-masthmagaa.com

Contact Us for Advertisement

Leave a Reply