ಅತಿಥೇಯ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಕೇವಲ 21 ರನ್ ಗಳಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್​ ಬ್ಯಾಟ್ಸ್​ಮನ್​ಗಳ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಸ್ಟ್ರೇಲಿಯಾದ ರನ್ ಮಷೀನ್ ಸ್ಟೀವ್ ಸ್ಮಿತ್ ನಂಬರ್ 1 ಟೆಸ್ಟ್ ಬ್ಯಾಟ್ಸ್​​ಮನ್​ ಪಟ್ಟವನ್ನ ಪುನಃ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ತಮ್ಮ ಕ್ರಿಕೆಟ್​ ಜೀವನದಲ್ಲಿ 8ನೇ ಬಾರಿ ನಂಬರ್ ಒನ್ ಸ್ಥಾನಕ್ಕೆರಿದ್ದಾರೆ.  ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿ ಸಾಕಷ್ಟು ಸಮಯದಿಂದ ಮೊದಲ ಸ್ಥಾನವನ್ನ ಅದಲು ಬದಲು ಮಾಡಿಕೊಳ್ಳುತ್ತಿದ್ದಾರೆ. 2015ರಲ್ಲಿ ಒಂದು ಸಲ ಮಾತ್ರ 8 ದಿನಗಳ ಅವಧಿಗೆ ನ್ಯೂಜಿಲೆಂಡ್​ನ ಕೇನ್ ವಿಲಿಯಮ್ಸನ್​ ನಂಬರ್ ಒನ್ ಸ್ಥಾನವನ್ನ ಅಲಂಕರಿಸಿದ್ರು. ಇದೀಗ ಸ್ಮಿತ್ ಮೊದಲ ಸ್ಥಾನದಲ್ಲಿದ್ರೆ, ಕೊಹ್ಲಿ ಎರಡನೇ ಸ್ಥಾನದಲ್ಲಿ, ಕೇನ್ ವಿಲಿಯಮ್ಸನ್​ ಮೂರನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ವಲ್ಲಿಂಗ್ಟನ್​ ಟೆಸ್ಟ್​ನಲ್ಲಿ 46 ಮತ್ತು 29 ರನ್ ಬಾರಿಸಿದ ಅಜಿಂಕ್ಯಾ ರಹಾನೆ ಒಂದು  ಸ್ಥಾನ ಜಂಪ್ ಆಗಿ 8ನೇ ಸ್ಥಾನಕ್ಕೇರಿದ್ದಾರೆ. ಮೊದಲ ಟೆಸ್ಟ್​ನಲ್ಲಿ 34 ಮತ್ತು 58 ರನ್ ಬಾರಿಸಿದ್ದ ಮಯಾಂಕ್ ಅಗರ್​ವಾಲ್ 10ನೇ ಸ್ಥಾನದಲ್ಲಿದ್ದಾರೆ. ಕಳಪೆ ಪ್ರದರ್ಶನ ನೀಡಿದ ಚೇತೇಶ್ವರ ಪೂಜಾರಾ ಎರಡು ಸ್ಥಾನ ಕುಸಿತ ಕಂಡಿದ್ದು 9ನೇ ಸ್ಥಾನದಲ್ಲಿದ್ದಾರೆ.

Contact Us for Advertisement

Leave a Reply